ಸಂಪಾಜೆ:ಸರ್ವ ಕ್ರೈಸ್ತ ಸಮುದಾಯ ಸಂಘದ ವಾರ್ಷಿಕ ಸಮಾವೇಶ ಹಾಗೂ ಸನ್ಮಾನ ಸಮಾರಂಭ ಫೆ.1ರಂದು ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ನಡೆಯಿತು. ಬೆಳ್ತಂಗಡಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್ ಡಾ.ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿದರು.ಸಂಘದ ಅಧ್ಯಕ್ಷ ಸಂತೋಷ್ ಕ್ರಾಸ್ತ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ
ನಿವೃತ್ತ ಬಿಷಪ್ ಲಾರೆನ್ಸ್ ಮುಕ್ಕುಯಿ,ವಿದಾನ ಪರಿಷತ್ ಸದಸ್ಯ ಐವನ್ ಡಿಸೋಜ,ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಜಾನಿ.ಕೆ.ಪಿ, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕೆ.ಆರ್. ಗಂಗಾಧರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ಆರ್.ಗಂಗಾಧರ ಅವರು ಬಿಷಪ್ ಅವರ ಕುರಿರು ಅಭಿನಂದನಾ ಭಾಷಣ ನೆರವೇರಿಸಿದರು. ವೇದಿಕೆಯಲ್ಲಿ
ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ಧರ್ಮಗುರು ರೆ.ಫಾ ಫೌಲ್.ಕ್ರಾಸ್ತ,ಸಂಪಾಜೆ ಹೋಳಿ ಟ್ರಿನಿಟಿ ಚರ್ಚಿನ ಧರ್ಮಗುರು ರೆ.ಫಾ.ಮನೋಜ್ ಪುತ್ತನ್ ಪುರಕ್ಯಲ್ ,ಕಲ್ಲುಗುಂಡಿಯ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಅನಿತಾ ಫರ್ನಾಂಡೀಸ್, ಕಲ್ಲುಗುಂಡಿ ಕ್ರಿಶ್ಚಿಯನ್ ಬ್ರದರನ್ ಅಸೆಂಬ್ಲಿಯ ಸಭಾಹಿರಿಯರಾದ ಕುಂಞುಮೋನ್ ,ಕಲ್ಲುಗುಂಡಿ ಹೆಬ್ರೋನ್ ಬ್ರದರನ್ ಅಸೆಂಬ್ಲಿಯ ಸಭಾ ಹಿರಿಯರಾದ ಸೆಬಾಸ್ಟಿಯನ್ ನೆಲ್ಲಿಕುಮೇರಿ,ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಉಪಾಧ್ಯಕ್ಷರಾದ ಲ್ಯಾನ್ಸಿ ಡಿಸೋಜ ಹೋಲಿ ಟ್ರಿನಿಟಿ ಚರ್ಚ್ ಸಂಪಾಜೆಯ ಉಪಾಧ್ಯಕ್ಷ ಜೋಯಿಜೋಸೆಫ್ ಉಪಸ್ಥಿತರಿದ್ದರು.

ಜಾನಿ.ಕೆ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆಯ ವಾರ್ಷಿಕ ವರದಿಯನ್ನು ಸಂಘದ ಕಾನೂನು ಸಲಹೆಗಾರ ಡೊಮಿನಿಕ್ ವಾಚಿಸಿದರು. ಕೋಶಾಧಿಕಾರಿ ಕುರಿಯಾಕೋಸ್ ಆಯವ್ಯಯ ಮಂಡಿಸಿದರು. ಲೂಕಾಸ್ ಟಿ.ಐ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೋಳಿಕುಟ್ಟಿ ಟೀಚರ್ ವಂದಿಸಿದರು. ಆರಂಭದಲ್ಲಿ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು. ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ.ವಕ್ತಾರ ಶವಾದ್ ಗೂನಡ್ಕ ,ಗೂನಡ್ಕದ ಬದ್ರಿಯಾ ಜುಮಾಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಕುಂಞಿಗೂನಡ್ಕ , ತೊಡಿಕಾನ ದೇವಸ್ಥಾನದ ಆಡಳಿತ ಸಮಿತಿಯ ನಿರ್ದೇಶಕ ವಸಂತ ಪೆಲ್ತಡ್ಕ ,ಕಲ್ಲುಗುಂಡಿ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಜಗದೀಶ್ ರೈ ,ನೆಲ್ಲಿಕುಮೇರಿ ಮತ್ತುಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಜ್ಞಾನಶೀಲನ್ ರಾಜು, ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಪ್ರಮಿಳಾ ಪೆಲ್ತಡ್ಕ , ನಾಗಮುತ್ತು ನೆಲ್ಲಿಕುಮೇರಿ ಮತ್ತಿತರರು ಉಪಸ್ಥಿತರಿದ್ದರು.





