ಅರಂತೋಡು: ಗೂನಡ್ಕ ಬೀಜದಕಟ್ಟೆ ಸಜ್ಜನ ಸಭಾ ಭವನದಲ್ಲಿ ನಡೆಯಲಿರುವ 26ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆ.ಆರ್.ಗಂಗಾಧರ ಅವರಿಗೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವಾಗತ ಸಮಿತಿ ಗೂನಡ್ಕ ವತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ನೀಡಿ, ಗೌರವಿಸಿ ಆಹ್ವಾನಿಸಲಾಯಿತು
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷ ಚಂದ್ರಶೇಖರ ಪೇರಾಲು, ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಪ್ರಧಾನ ಕಾರ್ಯದರ್ಶಿ ದಾಮೋದರ ಕೆ, ಕಾರ್ಯಕ್ರಮ ಸಂಯೋಜಕ ಚಿದಾನಂದ ಯು.ಎಸ್ ಗೌರವ ಸಲಹೆಗಾರರಾದ, ವೀರಪ್ಪ ಗೌಡ ದೋಳ, ರಹೀಂ ಬಬೀಜದಕಟ್ಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ರಾಮಚಂದ್ರ ಪಲ್ಲತ್ತಡ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ, ದಯಾನಂದ ಆಳ್ವ, ತೇಜಸ್ವಿ ಕಡಪಳ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಪ್ರೊ. ಬಾಲಚಂದ್ರ ಗೌಡ, ಪ್ರೊ.ಸಂಜೀವ ಕುದ್ಪಾಜೆ, ಕೇಶವ ಸಿ.ಎ., ಶರೀಫ್ ಜಟ್ಟಿಪಳ್ಳ, ಯೋಗೀಶ್ ಹೊಸೋಳಿಕೆ,ಲತಾಶ್ರೀ ಸುಪ್ರೀತ್ ಮೋಂಟಡ್ಕ, ಗೋಪಿನಾಥ್ ಮೆತ್ತಡ್ಕ,ಶಶ್ಮಿ ಭಟ್ ಅಜ್ಜಾವರ, ಮೊದಲಾದವರು ಉಪಸ್ಥಿತರಿದ್ದರು.