ಸುಳ್ಯ: ಸುಳ್ಯದ ಯುವ ಉದ್ಯಮಿ ಪ್ರಮೋದ್ ಕೆ. ನೇತೃತ್ವದ ಸಂಭ್ರಮ ಪೈಂಟ್ಸ್ನ ನೂತನ ಮಳಿಗೆ ಕಡಬದಲ್ಲಿ ಅ.18ರಂದು ಶುಭಾರಂಭಗೊಂಡಿತು. . ಕಡಬದ ಮುಖ್ಯಪೇಟೆಯಲ್ಲಿ ಸುಶಾಂತಿ ಕಾಂಪ್ಲೆಕ್ಸ್ನಲ್ಲಿ ತೆರೆಯಲಾದ ನೂತನ ಮಳಿಗೆಯನ್ನು ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ವೆಂಕಟ್ರಮಣ ರಾವ್ ಮಂಕುಡೆ ದೀಪ ಬೆಳಗಿಸಿ
ಉದ್ಘಾಟಿಸಿದರು. ಕೆ.ಪ್ರಭಾಕರನ್ ನಾಯರ್ ಸ್ವಾಗತ್, ಶಶಿಕಲಾ ಪ್ರಭಾಕರನ್ , ಸಂಸ್ಥೆಯ ಮಾಲಕ ಪ್ರಮೋದ್ ಕೆ, ಅರುಣಾ ಪ್ರಮೋದ್ ಪಿ.ಜಿ, ಶ್ರೀನಾಥ್, ಕಿಶೋರ್ ಕುಮಾರ್ ಬಿ.ಆರ್. ಪಿ.ಎಲ್. ಸುಜಿತ್ ಪಿ.ಕೆ, ಪದ್ಮನಾಭನ್ ನಾಯರ್, ಭಾಸ್ಕರನ್ ನಾಯರ್, ಪ್ರಭಾಕರನ್ ನಾಯರ್ ಸಿ.ಎಚ್, ಶ್ರೀಕಲಾ ಬಾಲಕೃಷ್ಣನ್ ನಾಯರ್,
ಉದ್ಯಮಿಗಳಾದ ಮಧುಸೂಧನ ಕುಂಭಕ್ಕೋಡ್, ರಾಮಚಂದ್ರ ಆಗ್ರೋ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು ಮತ್ತಿತರರು ಉಪಸ್ಥಿತರಿದ್ದರು.
ಸುಳ್ಯ ಕುರುಂಜಿಬಾಗ್ನಲ್ಲಿರುವ ಸ್ವಾಗತ್ ಕಾಂಪ್ಲೆಕ್ಸ್ನಲ್ಲಿರುವ ಸಂಭ್ರಮ ಪೈಂಟ್ಸ್ ನೇರವಾಗಿ ಫ್ಯಾಕ್ಟರಿಯಿಂದ ಗ್ರಾಹಕರಿಗೆ ಪೈಂಟ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಜನ ಮನ ಗೆದ್ದಿತ್ತು. ಇದೀಗ ಸಂಸ್ಥೆಯು ಕಡಬದಲ್ಲಿ ನೂತನ ಮಳಿಗೆ ಆರಂಭಗೊಂಡಿದೆ.