ಸುಳ್ಯ: ಜನವರಿ 28 ಕ್ಕೆ ಬೆಂಗಳೂರಿನಲ್ಲಿ ನಡೆಯುವ ಸಮಸ್ತ 100 ನೇ ವಾರ್ಷಿಕ ಉದ್ಘಾಟನಾ ಸಮ್ಮೇಳನಕ್ಕೆ ಸ್ವಯಂ ಸೇವಕರಾಗಿ ಸುಳ್ಯದಿಂದ ವಿಖಾಯ ಆಕ್ಟೀವ್ ವಿಂಗ್ ಸದಸ್ಯರು ಬೆಂಗಳೂರಿಗೆ ತೆರಳಲಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಸ್ತ ಮಹಾ ಉದ್ಘಾಟನಾ ಸಮ್ಮೇಳನದಲ್ಲಿ ಸುಳ್ಯ ದ ವಿಖಾಯ ಸದಸ್ಯರಾದ , ಸಿದ್ದೀಕ್ ಅಡ್ಕ, ಸಲೀಂ ಎಂ ಎ, ಶರೀಫ್ ಸಿ ಎ , ಅಬ್ದುಲ್ ಖಾದರ್ ಕೆ ಎಂ, ಅಬ್ದುಲ್ ಖಾದರ್ ಟಿ ಎಂ, ಮಹಮ್ಮದ್ ಕೆ ಎ ಇಂದು ರಾತ್ರಿ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.









