ಸುಳ್ಯ:ಸೆಪ್ಟೆಂಬರ್ 22ರಿಂದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುವ ಪ್ರತೀ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಮತ್ತು 60 ಪ್ರಶ್ನೆಗಳ ಬಗ್ಗೆ ಜಾಗೃತಿ, ಅರಿವು ಮೂಡಿಸುವ, ಸಮಾಲೋಚನಾ ಸಭೆ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ನಡೆಯಿತು. ಕರ್ನಾಟಕ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು. ಎಚ್. ಭಾಗವಹಿಸಿ ಮಾತನಾಡಿ
ಮುಸ್ಲಿಂ ಸಮುದಾಯ ಯಾವುದೇ ಗೊಂದಲಕ್ಕೆ ಒಳಗಾಗದೆ ಮಾಹಿತಿಯನ್ನು ನೀಡಿ ಈ ಸಮಗ್ರ ಸಮೀಕ್ಷೆಯಲ್ಲಿ ಭಾಗವಹಿಸಬೇಕು, ಇದು ಇತಿಹಾಸದಲ್ಲಿಯೇ ಅತ್ಯಮೂಲ್ಯ ಮತ್ತು ಐತಿಹಾಸಿಕ ಸಮೀಕ್ಷೆ ಎಂದರು. ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಸಮಗ್ರ ಮಾಹಿತಿ ನೀಡಿ,ಇದರಿಂದ ಯಾರಿಗೂ ಯಾವುದೇ ಸಮಸ್ಯೆ ಇಲ್ಲ ಎಂದರು.
ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶದ್ದೀನ್, ಪ್ರಮುಖರಾದ ಇಕ್ಬಾಲ್ ಎಲಿಮಲೆ, ಜಿ.ಕೆ. ಹಮೀದ್,ಕೆ. ಎಸ್. ಉಮ್ಮರ್, ಶಾಹುಲ್ ಹಮೀದ್ ಕುತ್ತಮೊಟ್ಟೆ,ಮಜೀದ್ ಜನತಾ, ಅಬೂಬಕ್ಕರ್ ಅಡ್ವೋಕೇಟ್, ಹಾಜಿ ಕೆಎoಎಸ್ ಮಹಮ್ಮದ್ ಬಾರ್ಪಣೆ, ಶರೀಫ್ ಬಾಳಿಲ, ಇಬ್ರಾಹಿಂ ಹಾಜಿ ಕತ್ತರ್, ಪಿ. ಎ. ಮಹಮ್ಮದ್, ಅಬ್ದುಲ್ ಖಾದರ್ ಕಲ್ಲುಗುಂಡಿ, ಅಬ್ಬಾಸ್ ಗುತ್ತಿಗಾರು, ಇಲ್ಯಾ ಸ್ ಕಾಶಿಪಟ್ಟಣ, ಶಾಫಿ ಕುತ್ತಮೊಟ್ಟೆ, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಅಶ್ರಫ್ ಗುಂಡಿ ಆರಂತೋಡು, ತಾಜ್ ಮಹಮ್ಮದ್ ಕಲ್ಲುಗುಂಡಿ,ಎ. ಕೆ. ಹಾಜಿ ಕುಂಭಕ್ಕೋಡ್, ಎ. ಕೆ. ಹನೀಫ್ ಸಂಪಾಜೆ, ರಶೀದ್ ಜಟ್ಟಿಪ್ಪಳ್ಳ, ಇಬ್ರಾಹಿಂ ಜಯನಗರ, ಫೈಝಲ್ ಕಟ್ಟೆಕ್ಕಾರ್ಸ್, ಅಬೂಬಕ್ಕರ್ ಸಿದ್ದೀಕ್ ಎಣ್ಮೂರ್, ಕೆ. ಎಚ್. ಮಹಮ್ಮದ್ ಪಂಜ, ಮಹಮ್ಮದ್ ಇರ್ಷಾದ್ ಕಲ್ಲುಗುಂಡಿ,ಅಮೀರ್ ಕುಕ್ಕುಂಬಳ ಆರಂತೋಡು ಮೊದಲಾದವರು ಭಾಗವಹಿಸಿದ್ದರು.





