ಸುಳ್ಯ:ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ದೊಡ್ಡ ಕೊಡುಗೆ ನೀಡುವ ಬೀಜದಕಟ್ಟೆಯ ಸಜ್ಜನ ಪ್ರತಿಷ್ಠಾನದ ಕಾರ್ಯ ಶ್ರೇಷ್ಠ ಮತ್ತು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಗೂನಡ್ಕದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೀಜದಕಟ್ಟೆಯ ಸಜ್ಜನ ಸಭಾ ಭವನದಲ್ಲಿ ನಡೆದ
ಸಜ್ಜನೋತ್ಸವ ಹಾಗೂ ಸಜ್ಜನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು
ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ.ಶಿವರಾಂ ಅವರಿಗೆ ‘ಸಜ್ಜನ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ‘ಬಡತನವನ್ನು ಪ್ರೀತಿಸಿದರೆ ಬದುಕು ಇಷ್ಟವಾಗುತ್ತದೆ, ನೋವನ್ನು ಪ್ರೀತಿಸಿದರೆ ಸೋಲು ಇಷ್ಟವಾಗುತ್ತದೆ, ಎಲ್ಲರನ್ನೂ ಪ್ರೀತಿಸಿದರೆ ಜಗತ್ತು ಇಷ್ಟವಾಗುತ್ತದೆ ಎಂದು ಹೇಳಿದರು.

ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ಅಭಿನಂದನಾ ಭಾಷಣ ಮಾಡಿ’ ಸವಾಲುಗಳನ್ನು ಎದುರಿಸಿ ಬೆಳೆಯುವ, ಸಾಧನೆ ಮಾಡುವವರು ನಿಜವಾದ ಸಾಧಕರು ಎಂದು ಅವರು ಹೇಳಿದರು.
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು,
ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ, ಮಹಮ್ಮದ್ ಕುಂಞಿ ಗೂನಡ್ಕ, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಚಂದ್ರಶೇಖರ ಪೇರಾಲು, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಗ್ರಾ.ಪಂ.ಸದಸ್ಯರಾದ ವಿಮಲಾ ಪ್ರಸಾದ್, ಅನುಪಮ,

ಗೂನಡ್ಕ ಶಾರದಾ ವಿದ್ಯಾಸಂಘದ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ, ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್, ಚಿದಾನಂದ ಮಾಸ್ಟರ್, ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಡಾ.ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು, ಸಿದ್ದಿಕ್ ಕೊಕ್ಕೊ, ರಹಮ್ಮತ್ತುಲ್ಲಾ ಉಡುಪಿ, ಇಬ್ರಾಹಿಂ ಶೀರೂರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆದರ್ಶ ದಂಪತಿ ಪ್ರಶಸ್ತಿ ನೀಡಲಾಯಿತು.
ದಾಮೋದರ ಮಾಸ್ಟರ್ ಸ್ವಾಗತಿಸಿ, ಜಿ.ಕೆ. ಹಮೀದ್ ವಂದಿಸಿದರು. ನೌಫಲ್ ವಿಟ್ಲ ಹಾಗೂ ಶಿಲ್ಪ ಹಾಸನ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಜಟ್ಟಿಪಳ್ಳ, ಅಯ್ಯೂಬ್ ಗೂನಡ್ಕ ಸಹರಿಸಿದರು.

ಯಾರಾಗುವಿರಿ ಸಜ್ಜನ ಲಕ್ಪತಿ ಕಾರ್ಯಕ್ರಮ:
ಬೆಳಿಗ್ಗೆ ಯಾರಾಗುವಿರಿ ಸಜ್ಜನ ಲಕ್ಪತಿ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಉದ್ಘಟಿಸಿದರು.ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು.ಅಬ್ದುಲ್ಲ ನಾವೂರು ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ನಡೆದ ಯಾರಾಗುವಿರಿ ಸಜ್ಜನ ಲಕ್ಪತಿ ಕಾರ್ಯಕ್ರಮವನ್ನು ಮಂಜುನಾಥ್ ಬಂಗ್ಲೆಗುಡ್ಡೆ ನಡೆಸಿ ಕೊಟ್ಟರು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್,
ನಿವೃತ್ತ ಪ್ರಾಂಶುಪಾಲ ಇಬ್ರಾಹಿಂ ಮಾಸ್ಟರ್, ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ.ಎ.ಉಮ್ಮರ್, ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಹನೀಫ, ನ.ಪಂ.ಸದಸ್ಯ ಶರೀಫ್ ಕಂಠಿ ಮಾಜಿ ಅಧ್ಯಕ್ಷ ಜಗದೀಶ್ ರೈ, ಬಿ.ಎಸ್.ಯಮುನಾ, ಗ್ರಾ.ಪಂ.ಸದಸ್ಯರಾದ ಶೌವಾದ್ ಗೂನಡ್ಕ, ಪಿ.ಕೆ.ಅಬೂಸಾಲಿ, ಉದ್ಯಮಿ ಸಲೀಂ ಪೆರುಂಗೋಡಿ, ಗೂನಡ್ಕ ಶಾರದಾ ಶಾಲೆಯ ಹನುಮಂತಪ್ಪ.ಜಿ, ಎಸ್.ಆಲಿ ಹಾಜಿ, ಅಬ್ಬಾಸ್ ಹಾಜಿ ಸಂಟ್ಯಾರ್, ಅಶ್ರಫ್ ಗುಂಡಿ, ಉಮ್ಮರ್ ದರ್ಖಾಸ್, ಸಿದ್ದಿಕ್ ಕೊಕ್ಕೋ ಮತ್ತಿತರರು ಉಪಸ್ಥಿತರಿದ್ದರು.









