ಬೆಂಗಳೂರು:ಹಲವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಬೆಂಗಳೂರಿನ ವೇಟ್ ಫೀಲ್ಡ್ ಕೈಗಾರಿಕಾ ವಲಯ ಮಹದೇವಪುರ ವ್ಯಾಪ್ತಿಯಲ್ಲಿರುವ ವಾಸಿಯದಲ್ಲಿ ಆಂತರಿಕ ವಿಚಾರಣೆ ಮತ್ತು ಶಿಸ್ತು ಕ್ರಮ ಎಂಬ ವಿಷಯದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ವಹಿಸಿದ್ದರು.ಬೆಂಗಳೂರಿನ
ಸಸ್ಮೋಸ್ ಗ್ರೂಪ್ ಆಫ್ ಕಂಪನೀಸ್, ಬೆಂಗಳೂರು.ಇದರ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ರಾಜಶೇಖರ ರೈ, ಕಾರ್ಯಗಾರವನ್ನು ಉದ್ಘಾಟಿಸಿದರು.ಎ ಎ ಪಾರ್ಟ್ನರ್ ನ ಖ್ಯಾತ ಹಿರಿಯ ವಕೀಲರು, ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರು ಹಾಗೂ ಖ್ಯಾತ ತರಬೇತುದಾರರಾದ ಮಂಜುನಾಥ ಬಿ ಮತ್ತು ಐಮ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಹೆಡ್ – ಹೆಚ್ ಆರ್ & ಐ ಆರ್ ಆಗಿರುವ ವಿನಯ್ ಎಂ ಎಸ್ ಅವರು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಸದಾಶಿವ, ಮುಖ್ಯಸ್ಥರು – ಮಾನವ ಸಂಪನ್ಮೂಲ ವಿಭಾಗ ಲಗುನ ಕ್ಲೋತಿಂಗ್, ಬೆಂಗಳೂರು ಕಲಾ ಬೋಸ್, ಚೀಫ್ – ಪೀಪಲ್ & ಕಲ್ಚರ್, ವ್ಯಪಿ ಲೆಕ್ಸ್ ಟೆಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
ನಟರಾಜು ಬಿ, ಬೀಜದಕಟ್ಟೆ ಅಭಿಮಾನಿಗಳ ಬಳಗ, ಬೆಂಗಳೂರು, ಆರಿಸ್ ಪಿ ಎಂ, ಪ್ರಧಾನ ವ್ಯವಸ್ಥಾಪಕರು – ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ಫಾರ್ಮಡ್ ಲಿಮಿಟೆಡ್ ಬೆಂಗಳೂರು, ಹೇಮಂತ್ ಪಟೇಲ್, ಉಪ ಪ್ರಧಾನ ವ್ಯವಸ್ಥಾಪಕರು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ – ಬಯೋಪ್ಲಸ್ ಲೈಫ್ ಸೈನ್ಸೆಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು,
ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕಂಪನಿಯ ಹಲವಾರು, ಮಾನವ ಸಂಪನ್ಮೂಲ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಪೂರ್ವಾಹ್ನ 9ರಿಂದ ಪ್ರಾರಂಭವಾದ ಕಾರ್ಯಗಾರ ಸಾಯಂಕಾಲ 5ರ ವರೆಗೆ ಯಶಸ್ವಿಯಾಗಿ ನಡೆಯಿತು. ಕಾರ್ಯಗಾರದಲ್ಲಿ ವಿಕ್ರಂ ಸಾಗರ್ ಸಕ್ಸೆನಾ ಸ್ವಾಗತಿಸಿ ನಿರೂಪಿಸಿದರು ಮತ್ತು ಶಶಾಂಕ್ ವಂದಿಸಿದರು.