ಸಂಪಾಜೆ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಆಶ್ರಯದಲ್ಲಿ ಡಿ.10ರಂದು ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನವು ಗೂನಡ್ಕದ ಸಜ್ಜನ ಸಭಾಭವನದಲ್ಲಿ ನಡೆಯಲಿದ್ದು ಈ ಸಮ್ಮೇಳನದಲ್ಲಿ ಲೇಖಕರಿಗೆ ಪುಸ್ತಕ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಸಮ್ಮೇಳನದಲ್ಲಿ
ಪುಸ್ತಕ ಪ್ರದರ್ಶನ , ಮಾರಾಟ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಲೇಖಕರು ಪುಸ್ತಕ ಬಿಡುಗಡೆ ಗೊಳಿಸಲು ಇಚ್ಛಿಸಿದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ಇವರಲ್ಲಿ ನ. 5ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕು.(ದೂರವಾಣಿ ಸಂಖ್ಯೆ; 8660461442) ಪುಸ್ತಕ ಪ್ರದರ್ಶನ ಮಾರಾಟ ಹಾಗೂ ವಸ್ತು ಪ್ರದರ್ಶನಕ್ಕೆ ಭಾಗವಹಿಸುವವರು ತಮ್ಮ ಹೆಸರನ್ನು ಪುಸ್ತಕ ಮಾರಾಟ ಹಾಗೂ ವಸ್ತು ಪ್ರದರ್ಶನ ಸಮಿತಿ ಸಂಚಾಲಕರಾದ ದಿನಕರ ಸಣ್ಣಮನೆ ಇವರಲ್ಲಿ ನ.5ರೊಳಗೆ ತಮ್ಮ ಹೆಸರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನೋಂದಾಯಿಸಲು ( 9449640046) ಸುಳ್ಯ ತಾಲೂಕು ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಉಮ್ಮರ್ ಬೀಜದಕಟ್ಟೆ ತಿಳಿಸಿರುತ್ತಾರೆ.