

ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುವಿಚಾರ ಸಾಹಿತ್ಯ ವೇದಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ಇದರ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸಾಹಿತ್ಯ ಸಂಭ್ರಮ ಪ್ರಯುಕ್ತ ‘ಮಹಿಳಾ ಸಾಹಿತ್ಯ ಸಂಭ್ರಮ’ ಕನ್ನಡ ಭವನದಲ್ಲಿ ನಡೆಯಿತು.ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್ ಉದ್ಘಾಟಿಸಿದರು. ‘ಜನಪದ ಸಾಹಿತ್ಯದಲ್ಲಿ ಸ್ತ್ರೀ ಎಂಬ ವಿಷಯದ ಬಗ್ಗೆ
ಶಿವಣ್ಣ ಕೊಳ್ಳೆಗಾಲ ಉಪನ್ಯಾಸ ನೀಡಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಕೆ. ಎಂ ಭಾಗವಹಿಸಿದ್ದರು. ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ರಾಮಚಂದ್ರ ಪಲ್ಲತ್ತಡ್ಕ, ದಯಾನಂದ ಆಳ್ವ ಉಪಸ್ಥಿತದ್ದರು. ತೇಜಸ್ವಿ ಕಡಪಳ ಸ್ವಾಗತಿಸಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ ವಂದಿಸಿದರು.ಚಂದ್ರಮತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಲ್ಲಿ ಶೈಲಜಾ ಬಿ., ಅರೆಭಾಷೆ ಅಂಕಣಕಾರ್ತಿ ಚಂದ್ರವತಿ ಬಡ್ಡಡ್ಕ, ಸುವಿಚಾರ ವೇದಿಕೆಯ ಕಾರ್ಯದರ್ಶಿ . ಗಿರಿಜಾ ಎಂ. ವಿ., ಸುಳ್ಯ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.