ಸುಳ್ಯ:ರೋಟರಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಕಸಾಪ ಸುಳ್ಯ ಹೋಬಳಿ ಘಟಕದಿಂದ ಕಿಟ್ ವಿತರಣಾ ಸಮಾರಂಭವು ನಡೆಯಿತು. ರೋಟರಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ರಾಮಮೋಹನ್ ಉದ್ಘಾಟಿಸಿದರು. ಸಾಹಿತಿ
ಕುಮಾರಸ್ವಾಮಿ ತೆಕ್ಕುಂಜ , ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಶಿಕ್ಷಕರಾದ ಚಂದ್ರಕಲಾ.ಡಿ ಶ್ರೀಹರಿ ಪೈಂದೋಡಿ, ಜಯಶ್ರೀ.ಕೆ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷೆ ರಕ್ಷಾ, ಕಾರ್ಯದರ್ಶಿ ನಮನ್ ರಾಜ್ ಉಪಸ್ಥಿತರಿದ್ದರು.ಶಿಕ್ಷಕಿ ರಮ್ಯಾ ಅಡ್ಕಾರ್, ವಿದ್ಯಾರ್ಥಿನಿಯರಾದ ರಕ್ಷಾ, ಆಯುಷತ್ ಆದಿಲ ಮಾತನಾಡಿದರು. ವಿದ್ಯಾರ್ಥಿನಿಯರಾದ ವಂದಿತ, ಗಾನವಿ ,ನಿರೀಕ್ಷಾ ಹಾಗೂ ಪೂರ್ವಿಕ ಪ್ರಾರ್ಥಿಸಿ, ಶ್ರೇಯಸ್ ಬೇರಿಕೆ ಸ್ವಾಗತಿಸಿ, ಹಂಸಿಕ ವಂದಿಸಿದರು. ವಂದಿತ ಹಾಗೂ ಅನುಷ್ಕಾ ಕಾರ್ಯಕ್ರಮ ನಿರೂಪಿಸಿದರು.





