ಗೂನಡ್ಕ:ಕನ್ನಡ ಸಾಹಿತ್ಯ ಪರಿಷತ್ ಹಾಗು ಗೂನಡ್ಕದ ಸಜ್ಜನ ಪ್ರತಿಷ್ಠಾನದ ನೇತೃತ್ವದಲ್ಲಿ ಡಿ.10 ರಂದು ನಡೆಯುವ ಸುಳ್ಯ ತಾಲೂಕು 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸ್ಟಿಕ್ಕರ್ ಹಾಗು ಬ್ಯಾಗ್ ಬಿಡುಗಡೆ ಮಾಡಲಾಯಿತು. ಅ.22 ರಂದು ಗೂನಡ್ಕದ ಸಜ್ಜನ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ
ಸ್ಟಿಕ್ಕರನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಬಿಡುಗಡೆ ಮಾಡಿದರು. ಬ್ಯಾಗನ್ನು ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಬಿಡುಗಡೆ ಮಾಡಿದರು.ಸ್ವಾಗತ ಸಮಿತಿ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಸ್ವಾಗತ ಸಮಿತಿ ಹಾಗು ಕಸಾಪ ಪದಾಧಿಕಾರಿಗಳಾದ ಕೆ.ಆರ್.ಗಂಗಾಧರ, ದಾಮೋದರ ಮಾಸ್ತರ್, ಪಿ.ಬಿ.ಸುಧಾಕರ ರೈ, ಸಂಜೀವ ಕುದ್ಪಾಜೆ, ಸಂತೋಷ್ ಕುತ್ತಮೊಟ್ಟೆ,ಜಿ.ರಾಮಚಂದ್ರ,ಯಮುನಾ ಬಿ.ಎಸ್, ಆಶಾ ಬಿ.ಆರ್, ದಿನಕರ ಎಸ್.ಎಂ, ವೀರಪ್ಪ ಗೌಡ, ಕೆ.ಪಿಜಗದೀಶ, ಕೆ.ಆರ್.ಜಗದೀಶ ರೈ,ಅಬ್ಬಾಸ್ ಸಂಟ್ಯಾರ್,ಲಿಸ್ಸಿ ಮೊನಾಲಿಸಾ, ಅನುಪಮ, ಉಮ್ಮರ್, ಉನೈಸ್ ಪಿ.ಎಂ, ಕೆ.ಎ.ರಜಾಕ್, ಮೂಸಾನ್ ಕಲೀಂ, ಆಸಿಫ್, ಜಯರಾಮ ಶೆಟ್ಟಿ, ದೇವಪ್ಪ ಹೈದಂಗೂರು, ಜಯಾನಂದ ಸಂಪಾಜೆ, ಚಂದ್ರಮತಿ.ಕೆ., ಲತಾಶ್ರೀ ಸುಪ್ರೀತ್ ಮೋಂಟಡ್ಕ, ರಾಮಚಂದ್ರ ಪಲ್ಲತ್ತಡ್ಕ, ಕೇಶವ ಮಾಸ್ತರ್, ರಹೀಂ ಬೀಜದಕಟ್ಡೆ, ಉಬೈಸ್ ಪಿ.ಯು, ಅಬ್ದುಲ್ಲಾ ಎ, ಅಶ್ರಫ್ ಗುಂಡಿ, ಅಬೂಸಾಲಿ ಗೂನಡ್ಕ,ಆಶಾ ಎಂ.ಕೆ.ಗೂನಡ್ಕ, ಕಾಂತಿ.ಬಿ.ಎಸ್, ಟಿ.ಎಂ. ಅಬ್ದುಲ್ ರಜಾಕ್ ಹಾಜಿ, ರಮೇಶ್ ಎಸ್, ಹನುಮಂತಪ್ಪ, ಸನತ್, ಸಾದಿಕ್ ಎಸ್.ಎ, ಶೌವಾದ್ ಗೂನಡ್ಕ, ಸೌಮ್ಯ, ಉಷಾಲತಾ, ತಾಜುದ್ದೀನ್, ಕಮಲಾಕ್ಷ, ಚಿದಾನಂದ ಯು.ಎಸ್,ಅಫ್ರಿದ್, ಅಹಮ್ಮದ್ ಅಯ್ಯೂಬ್
ಹಾಗೂ ಎಲ್ಲಾ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಮಿತಿಗಳ ಕೆಲಸ ಕಾರ್ಯಗಳ ಕುರಿತು ಚರ್ಚಿಸಲಾಯಿತು.