ಸುಳ್ಯ: ಡಿ.10 ರಂದು ಗೂನಡ್ಕ ಸಜ್ಜನ ಸಭಾಭವನದಲ್ಲಿ ನಡೆಯಲಿರುವ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಾಹಿತಿ ಕಛೇರಿಯನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಆರ್ ಗಂಗಾಧರ್ ಉದ್ಘಾಟಿಸಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಪ್ರಧಾನ

ಕಾರ್ಯದರ್ಶಿ ದಾಮೋದರ ಮಾಸ್ಟರ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್,ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ,ಪ್ರಗತಿಪರ ಕೃಷಿಕ ವೀರಪ್ಪ ಗೌಡ ದೋಳ,ಸಜ್ಜನ ಪ್ರತಿಷ್ಠಾನ ನಿರ್ದೇಶಕ ರಹೀಂ ಬೀಜದಕಟ್ಟೆ, ಶರೀಫ್ ಜಟ್ಟಿಪಳ್ಳ, ಅಯ್ಯೂಬ್,ಮಂಜುನಾಥ್ ಹಿರಿಯೂರು, ಪದ್ಮಯ್ಯ ಗೌಡ, ಹಾಜಿ ಉಮ್ಮರ್ ಪಿ ಎ ಮೊದಲಾದವರು ಉಪಸ್ಥಿತರಿದ್ದರು.
ಚಿದಾನಂದ ಮಾಸ್ಟರ್ ಸ್ವಾಗತಿಸಿದರು.