ವಳಲಂಬೆ:ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ನ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆದ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿತು.ಹಿರಿಯ ಸಾಹಿತಿ ಎ.ಕೆ.ಹಿಮಕರ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ
‘ಸಿರಿಗನ್ನಡ ಸನ್ಮಾನ’ ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ್ ವಹಿಸಿದ್ದರು. ಬೆಳ್ತಂಗಡಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಸಮಾರೋಪ ಭಾಷಣ ಮಾಡಿದರು. ಸಮ್ಮೇಳನಾಧ್ಯಕ್ಷರಾದ ಎ.ಕೆ ಹಿಮಕರ ಅವರು ಸಮ್ಮೇಳನಾಧ್ಯಕ್ಷರ ನುಡಿಯನ್ನು ನುಡಿದರು.
ಸಿರಿಗನ್ನಡ ಸನ್ಮಾನ:
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಎಚ್.ಬಿ ರಾಧಾಕೃಷ್ಣ, ಸಮಾಜಸೇವಾ ಕ್ಷೇತ್ರದಲ್ಲಿ ವಸಂತಕುಮಾರ್ ಕಮಿಲ, ಸಾಹಿತ್ಯ ಕ್ಷೇತ್ರದಲ್ಲಿ ಉಮೇಶ್ ಬಿಳಿಮಲೆ ಹಾಗೂ ಶಿವರಾಮ ಕುಂಞೇಟ್ಟಿ, ಕ್ರೀಡೆ ಹಾಗೂ ಕಲಾ ಪೋಷಕ ಕ್ಷೇತ್ರದಲ್ಲಿ ವೇಣುಗೋಪಾಲ್ ದೇರಪ್ಪಜ್ಜನಮನೆ, ರಂಗಭೂಮಿ ಕ್ಷೇತ್ರದಲ್ಲಿ ಶಿವರಾಮ ಕಲ್ಮಡ್ಕ, ಭೂತಾರಾಧನೆ ಕ್ಷೇತ್ರದಲ್ಲಿ ಬೊಳಿಯ ಅಜಿಲ ಹಾಗೂ ಚಿದಾನಂದ ಅಡ್ಡನಪಾರೆ, ವಿದ್ಯಾರ್ಥಿ ಕಲಾ ಪ್ರತಿಭೆ ಕ್ಷೇತ್ರದಲ್ಲಿ ರಚನಾ ಚಿದ್ಗಲ್ಲು, ಯುವ ಪ್ರತಿಭೆ ಕ್ಷೇತ್ರದಲ್ಲಿ ಉಲ್ಲಾಸ್ ಕಜ್ಜೋಡಿ ಹಾಗೂ ನಿರಂಜನ್ ಕಡ್ಲಾರು, ಯುವ ಉದ್ಯಮಿ ಕ್ಷೇತ್ರದಲ್ಲಿ ದೇವಿಪ್ರಸಾದ್ ಚಿಕ್ಮುಳಿ ಹಾಗೂ ಸಮಾಜ ಸೇವಾ ತಂಡಗಳಾದ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಯುವ ತೇಜಸ್ಸು ಟ್ರಸ್ಟ್(ರಿ.) ಪಂಜ, ಪುಸ್ತಕ ಗೂಡು ಹಾಲೆಮಜಲು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಹಾಗೂ ವಿಪತ್ತು ನಿರ್ವಹಣಾ ತಂಡ ಗುತ್ತಿಗಾರು ಇವರಿಗೆ ಸಿರಿಗನ್ನಡ ಸನ್ಮಾನ ಮಾಡಲಾಯಿತು.
ಸಮ್ಮೇಳಳದ ಸಂಘಟನಾ ಸಮಿತಿಯ ಅಧ್ಯಕ್ಷ ವೆಂಕಟ್ ದಂಬೆಕೋಡಿ,ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪಂಜ ಹೋಬಳಿ ಕಸಾಪ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಸುಳ್ಯ ಹೋಬಳಿ ಕಸಾಪ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಕಸಾಪ ಜಿಲ್ಲಾ ಸಮಿತಿ ನಿರ್ದೇಶಕ ರಾಮಚಂದ್ರ ಪಲ್ಲತಡ್ಕ, ಸಮ್ಮೇಳಳದ ಸಂಘಟನಾ ಸಮಿತಿ ಕಾರ್ಯದರ್ಶಿ ಕೇಶವ ಹೊಸೋಳಿಕೆ ಮತ್ತಿತರರು ಉಪಸ್ಥಿತರಿದ್ದರು.
ರೂಪವಾಣಿ.ಬಿ ಹಾಗೂ ಬಿಟ್ಟಿ.ಬಿ ನೆಡುನಿಲಂ ಸನ್ಮಾನಿತರ ಪರಿಚಯ ಮಾಡಿದರು. ರಾಮಚಂದ್ರ ಪಳಂಗಾಯ ಸ್ವಾಗತಿಸಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿ ವೆಂಕಪ್ಪ ಕೇನಾಜೆ ವಂದನಾರ್ಪಣೆ ಮಾಡಿದರು.ಸಮ್ಮೇಳನದ ಅಂಗವಾಗಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಸಂಭ್ರಮ ನಡೆಯಿತು.





