ಸುಳ್ಯ:ನೆಹರು ಸ್ಮಾರಕ ಪದವಿಪೂರ್ವ ಕಾಲೇಜು,
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ,ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಮತ್ತು ಭಾವನ ಸುಗಮ ಸಂಗೀತ ಬಳಗ ಸುಳ್ಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ “ಸಾಹಿತ್ಯ ಸಂಭ್ರಮ 2022” ಅಂಗವಾಗಿ ಗಾನ ಯಾನ-ಗೀತ ಗಾಯನ ಕಾರ್ಯಕ್ರಮ ನಡೆಯಿತು.26ನೇ ಸುಳ್ಯ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಕಾಲೇಜಿನ ಸಂಚಾಲಕ ಕೆ. ಆರ್. ಗಂಗಾಧರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ
ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಕೆ.ಆರ್.ಗಂಗಾಧರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಪ್ಯುಲರ್ ಎಜುಕೇಶನ್ ಸೊಸೈಟಿ ಯ ಉಪಾಧ್ಯಕ್ಷ ಜತ್ತಪ್ಪ ಮಾಸ್ತರ್, ಕಸಪಾ ಪದಾಧಿಕಾರಿಗಳಾದ ರಾಮಚಂದ್ರ ಪಲ್ಲತಡ್ಕ, ಕೇಶವ ಮಾಸ್ತರ್,ತೇಜಸ್ವಿ ಕಡಪಳ ಉಪಸ್ಥಿತರಿದ್ದರು.ಭಾವನ ಬಳಗದ ಕೆ ಆರ್ ಗೋಪಾಲಕೃಷ್ಣ ನೇತೃತ್ವದಲ್ಲಿ ರಮ್ಯಾ ದಿಲೀಪ್, ತೇಜಸ್ ಕಲ್ಲುಗುಂಡಿ, ಗಿರಿಜಾ ಮತ್ತು ಯಶೋದ ಗಾನ ಯಾನ -ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಸುಳ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಶ್ರೀ ಚಂದ್ರಶೇಖರ್ ಪೇರಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಸ್ವಾಗತಿಸಿದರು.ಉಪನ್ಯಾಸಕ ಮೋಹನ್ ಚಂದ್ರ ವಂದಿಸಿದರು.ಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರಚನಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂಧಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.