ಸುಳ್ಯ:ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾಹಿತಿ ವೈ.ಎಸ್ . ಹರಗಿ ಯವರ “ಇಮಾಮ್ ಸಾಹೇಬರ ಕುದುರೆ” ಕಾದಂಬರಿಗೆ 2025 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇವರ 2024 ನೇ ಸಾಲಿನ ಅತ್ಯುತ್ತಮ ಕೃತಿ ಎಂದು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು
25 ಸಾವಿರ ನಗದು ಬಹುಮಾನ, ಫಲಕ , ಪ್ರಶಸ್ತಿ ಪ್ರಮಾಣ ಪತ್ರ ಒಳಗೊಂಡಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈ.ಎಸ್ ಹರಗಿ ಅವರು ಕನ್ನಡದ ಪ್ರಮುಖ ಕಾದಂಬರಿಕಾರ ಮತ್ತು ಕಥೆಗಾರರಾಗಿದ್ದು, ಇವರ ಪ್ರಸಿದ್ಧ ಕಾದಂಬರಿ ‘ ಉರಿವ ಜಲ ‘ ಕೃತಿಗೆ 2014ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇವರ ಸಾಹಿತ್ಯವು ಮುಖ್ಯವಾಗಿ ಗ್ರಾಮೀಣ ಬದುಕಿನ ವಾಸ್ತವತೆ ಮತ್ತು ಜನಸಾಮಾನ್ಯರ ಮನಮುಟ್ಟುವ ಕೃತಿಗಳಾಗಿರುವ ಹಿನ್ನಲೆಯಲ್ಲಿ ಇವರ ಮತ್ತೊಂದು ಕೃತಿ 2025 ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇವರ ನಾನಾ ಕೃತಿಗಳನ್ನು ಗುರುತಿಸಿ ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ, ಚಡಗ ಪ್ರಶಸ್ತಿ, ಡಾ. ಶಾಂತರಾಮ್ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಅವ್ವ ಪ್ರಶಸ್ತಿ ಗಳು ಲಭಿಸಿದೆ.









