ಸುಳ್ಯ:ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನದ ಐದನೇ ಡ್ರಾ ಮಾ.15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋರೂಂನಲ್ಲಿ ನಡೆಯಿತು.ಕಾರ್ಡ್ ಸಂಖ್ಯೆ S 2989 ಪಡೆದಿರುವ ಮೇಘಾ ದೊಡ್ಡತೋಟ ವಿಜೇತರಾದರು. ಇವರಿಗೆ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ. ಡ್ರಾ ವಿಜೇತರ ಆಯ್ಕೆಯನ್ನು ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಡಿ.ಸಿ.ಬಾಲಚಂದ್ರ ನೆರವೇರಿಸಿದರು. ಸಂಸ್ಥೆಯ ಗ್ರಾಹಕರು, ಪಾಲುದಾರರು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.












