ಸುಳ್ಯ: ಸುಳ್ಯದ ‘ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿ
ಆಕರ್ಷಕ ಆಫರ್ಗಳ ಮಹಾಮೇಳ ಆರಂಭಗೊಂಡಿದೆ. ಪ್ರತಿ ಶನಿವಾರ ಮೆಗಾ ವೀಕೆಂಡ್ ಸೇಲ್, ಪ್ರತಿ ದಿನ ಆಕರ್ಷಕ ದರ ಕಡಿತ ಮಾರಾಟ ಜೊತೆಗೆ ಇಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರದಲ್ಲಿಯೇ ಹೊಸ ಪ್ರಯೋಗ ಕೋಂಬೋ ಆಫರ್ ಆರಂಭವಾಗಿದೆ. ಸುಳ್ಯದ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾಯಾಲೋಕ ಸಫಲ ಉದ್ಯಮ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಸುಳ್ಯದ ಐದು ಮಂದಿ ಯುವಕರು ಸೇರಿ ಆರಂಭಿಸಿದ ಸಫಲ ಉದ್ಯಮ ಕೇವಲ 4 ತಿಂಗಳಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಶಾಂತ ಸುಂದರ ಪರಿಸರ ಅಂಬೆಟಡ್ಕದ ಆರೋಹಿ ಎನ್ಕ್ಲೇವ್ನಲ್ಲಿ ವಿಶಾಲವಾದ
ಮಳಿಗೆಯಲ್ಲಿ ತೆರೆದಿರುವ ಸಫಲ ಉದ್ಯಮದಲ್ಲಿ ಪ್ರಸಿದ್ಧ ಬ್ರಾಂಡ್ಗಳ ಆಕರ್ಷಕ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಸಾಮಾಗ್ರಿಗಳ ಅಪೂರ್ವ ಮತ್ತು ಅದ್ಭುತ ಸಂಗ್ರಹವೇ ಇದೆ. ಗುಣಮಟ್ಟದಲ್ಲಿ ರಾಜಿ ಇಲ್ಲದ, ಆದರೆ ಅತೀ ಕಡಿಮೆ ದರದಲ್ಲಿ ವಿಶೇಷ ದರ ಕಡಿತದೊಂದಿಗೆ ಗ್ರಾಹಕರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಬೆಳೆದು ಸಫಲ ಉದ್ಯಮ ಸಫಲತೆಯೆಡೆಗೆ ಮುನ್ನುಗ್ಗಿದೆ.

ವೀಕೆಂಡ್ ಮೆಗಾ ಸೇಲ್:
ಸಫಲ ಉದ್ಯಮದಲ್ಲಿ ವಾರ ಪೂರ್ತಿ ಆಕರ್ಷಕ ಆಫರ್ಗಳೊಂದಿಗೆ ವಿಶೇಷ ಮಾರಾಟ ನಡೆಯುತ್ತಿದೆ.ಜೊತೆಗೆ ವಾರದ ಶನಿವಾರ ವಿಶೇಷ ಮಾರಾಟ ವ್ಯವಸ್ಥೆ ಹಮ್ಮಿಕೊಳ್ಳಲಾಗಿದ್ದು ಫೆ.7ರ ಶನಿವಾರದಿಂದ ಮೆಗಾ ವೀಕೆಂಡ್ ಸೇಲ್ ಆರಂಭಗೊಂಡಿದೆ. ವೀಕೆಂಡ್ ದಿನ ಖರೀದಿ ನಡೆಸಿದ ಗ್ರಾಹಕರಿಗೆ ಡ್ರಾ ಮೂಲಕ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಪ್ರತಿ ದಿನ ನೀಡುವ ನೂತನ ಹೊಸ ದರ ಕಡಿತ ಮಾರಾಟ ಆರಂಭಗೊಂಡಿದೆ ಮತ್ತು ವಿನೂತನ ಕೋಂಬೋ ಆಫರ್ ಲಾಂಚ್ ಮಾಡಲಾಗಿದೆ..!
ಏನಿದು ಕೋಂಬೋ ಆಫರ್.. ಎಷ್ಟು ದರ ಕಡಿತ ಮಾರಾಟ..?
ಸುಳ್ಯದ ಇತಿಹಾಸದಲ್ಲಿಯೇ ಇಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ವೈವಿಧ್ಯಮಯ ದರ ಕಡಿತದದ ಸ್ಲಾಬ್ಗಳನ್ನು ಘೋಷಿಸಿರುವ ಸಫಲ ಉದ್ಯಮ ಗ್ರಾಹಕರಿಗಾಗಿ ‘ಕೋಂಬೋ ಆಫರ್’ ಎಂಬ ಹೊಸ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.
ಅಂದರೆ ಸಾಮಾನ್ಯವಾಗಿ ಕೆಲವು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿಗೆ ಶೇ.25ರಷ್ಟು ದರ ಕಡಿತ ಮಾರಾಟ ಇದೆ ಎಂದಾದರೆ, ಎರಡು ಇಲೆಕ್ಟ್ರಾನಿಕ್ಸ್ ಐಟಮ್ ಒಟ್ಟಿಗೆ ಖರೀದಿಸಿದರೆ ಶೇ.5ರಷ್ಟು ಹೆಚ್ಚುವರಿಯಾಗಿ


ದರ ಕಡಿತ ಮಾಡಲಾಗುತ್ತದೆ. ಅಲ್ಲದೆ ಎರಡು ವಸ್ತುಗಳು ಸೇರಿ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಆದರೆ ಮತ್ತೆ ಹೆಚ್ಚುವರಿ ಶೇ.3 ದರ ಕಡಿತ ಮಾಡಲಾಗುತ್ತದೆ. ಅಂದರೆ ಸಾಮಾನ್ಯ ಖರೀದಿಗೆ ಶೇ.25 ಆಫರ್ ಇರುವ ಐಟಂಗೆ ಕೋಂಬೋ ಖರೀದಿ ಮಾಡಿದಲ್ಲಿ ಅದು ಹೆಚ್ಚುವರಿ ಶೇ.5 ಹಾಗೂ, ಶೇ.3 ಸೇರಿದರೆ ಶೇ.33 ದರ ಕಡಿತ ಮಾಡಿದಂತಾಗುತ್ತದೆ. ಅದರಂತೆ ಕೆಲವು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿಗೆ ಶೇ.50 ದರ ಕಡಿತ ಘೋಷಿಸಲಾಗಿದೆ. ಕೋಂಬೋ ಆಫರ್ನಲ್ಲಿ ಎರಡು ವಸ್ತುಗಳು 10 ಸಾವಿರಕ್ಕಿಂತ ಮೇಲ್ಪಟ್ಟರೆ ಶೇ.58 ಕಡಿತ ಆಗುತ್ತದೆ, ಕೆಲವು ಸಾಮಾಗ್ರಿಗಳಿಗೆ ಶೇ.55 ದರ ಕಡಿತ ಮಾರಾಟ ಇದ್ದದ್ದು ಶೇ.63ರವರೆಗೆ ಕಡಿತದ ಲಾಭ ದೊರೆಯಲಿದೆ. ಹೀಗೆ ಸಫಲ ಉದ್ಯಮದಲ್ಲಿ ದರ ಕಡಿತ ಮಾರಾಟದ ಮಹಾಪೂರವೇ ಘೋಷಿಸಲಾಗಿದೆ. ದರ ಕಡಿತದಲ್ಲಿ

ಆಕರ್ಷಕ ಸ್ಲಾಬ್ಗಳನ್ನು ಘೋಸಿಸಿದ್ದು ವಿವಿಧ ಬ್ರಾಂಡೆಡ್ ಐಟಂಗಳಿಗೆ ಶೇ.15ರಿಂದ ಶೇ.63ರ ವರೆಗೆ ವಿವಿಧ ಸ್ತರದ ಡಿಸ್ಕೌಂಟ್ ಲಭ್ಯವಿದೆ. ಈ ರೀತಿಯ ದರ ಕಡಿತ ಮಾರಾಟ ಎಲ್ಲಾ ದಿನ ನಿರಂತರ ಇರಲಿದೆ, ಶನಿವಾರದ ಮೆಗಾ ವೀಕೆಂಡ್ ಸೇಲ್ನಲ್ಲಿ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡುವುದು ಈ ದಿನದ ವಿಶೇಷ ಎಂದು ಸಫಲ ಉದ್ಯಮ ಮಳಿಗೆಯ ಪಾಲುದಾರರು ತಿಳಿಸಿದ್ದಾರೆ.
ಖರೀದಿಗೆ ಸುಲಭ ಕಂತುಗಳ ವ್ಯವಸ್ಥೆ:
ಜನ ಸಾಮಾನ್ಯರಿಗೆ ತಮ್ಮ ಕನಸಿನ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ಸುಲಭವಾಗಿ ಖರೀದಿಸಲು ಸುಲಭ ಕಂತುಗಳನ್ನು ಹಮ್ಮಿಕೊಳ್ಳಲಾಗಿದೆ. ರೂ.1000 ಕಂತು ಮೂಲಕ ಸಾಮಾಗ್ರಿ ಖರೀದಿಸಬಹುದು. ಸುಲಭ ಕಂತುಗಳ ಗ್ರಾಹಕರಿಗಾಗಿ ಅದೃಷ್ಟ ಕೂಪನ್ ಡ್ರಾ ಮೂಲಕ ಪ್ರತಿ ತಿಂಗಳು ಒಬ್ಬ ಅದೃಷ್ಟಶಾಲಿಗೆ ಒಂದು ಲಕ್ಷ ರೂಗಳ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ತಮ್ಮದಾಗಿಸುವ ಅವಕಾಶ ಇದೆ. ತಮ್ಮ ಆಯ್ಕೆಯ ಪ್ರತಿಷ್ಠಿತ ಬ್ರಾಂಡ್ಗಳ ಸಾಮಾಗ್ರಿಗಳನ್ನು ಪಡೆದುಕೊಳ್ಳಬಹುದು.

ಬ್ರಾಂಡೆಡ್ ಐಟಂಗಳ ಮಹಾಮೇಳ:
ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಪ್ರಸಿದ್ಧ ಬ್ರಾಂಡೆಡ್ ಕಂಪೆನಿಗಳ ವಸ್ತುಗಳನ್ನೇ ಮಾರಾಟ ಮಾರಾಟ ಮಾಡುತಿದೆ. ಬ್ರಾಂಡೆಡ್ ಐಟಂಗಳ ಮಹಾಮೇಳವೇ ಇಲ್ಲಿ ಮೇಳೈಸಿದೆ. ಸ್ಯಾಮ್ಸಂಗ್,ಎಲ್ಜಿ, ಸೋನಿ, ಪೀಜಿಯನ್, ಪಾನಾಸೋನಿಕ್, ಟಾಟಾ ಕ್ರೋಮಾ, ಐಎಫ್ಬಿ, ವರ್ಲ್ಪೂಲ್, ಹೈಯರ್, ಕೆಲ್ವಿನೇಟರ್, ಪ್ರೆಸ್ಟೀಜ್, ವಿಗಾರ್ಡ್, ಹೆಚ್ಪಿ, ಡೆಲ್, ಬೋಶ್ ಹೀಗೆ ಎಲ್ಲಾ ಕಂಪೆನಿಗಳ ವೈವಿಧ್ಯಮಯ, ಅತ್ಯಾಧುನಿಕ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಅತೀ ಕಡಿಮೆ ದರದಲ್ಲಿ ಸಫಲ ಉದ್ಯಮದಲ್ಲಿ ಲಭ್ಯವಿದೆ.

ಏನಿದೆ..ಏನಿಲ್ಲಾ..ಎಲ್ಲವೂ ಇಲ್ಲಿದೆ..!
ಸಫಲ ಉದ್ಯಮದ ವಿಶಾಲ ಮಳಿಗೆಗೆ ಪ್ರವೇಶಿಸಿದರೆ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಅದ್ಭುತ ಲೋಕವೇ ತೆರೆದುಕೊಳ್ಳುತ್ತದೆ. ಇಲ್ಲಿ ಏನಿದೆ, ಏನಿಲ್ಲಾ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಎಲ್ಲವೂ ಇದೆ. ಎಲ್ಲಾ ಕಂಪೆನಿಗಳ ಆಕರ್ಷಕ ಟಿವಿ, ಎಸಿ,ರೆಫ್ರಿಜರೇಟರ್, ಡಿಶ್ ವಾಶರ್, ವಾಸಿಂಗ್ ಮೆಷಿನ್, ಮಿಕ್ಸಿ, ಗ್ರೈಂಡರ್, ಇನ್ವರ್ಟರ್, ಬ್ಯಾಟರಿ, ಮೈಕ್ರೋವೇವನ್, ಗ್ಯಾಸ್ ಸ್ಟೌವ್, ಪ್ರಿಂಟರ್, ಕಂಪ್ಯೂಟರ್, ಲ್ಯಾಪ್ಟಾಪ್ ಹೀಗೆ ಎಲ್ಲಾ ಬಗೆಯ ಇಲೆಕ್ಟ್ರಾನಿಕ್ಸ್ ವಸ್ತುಗಳ ಅದ್ಭುತ ಲೋಕವೇ ಇಲ್ಲಿದೆ. ವೈವಿಧ್ಯಮಯ ಬಣ್ಣ, ಡಿಸೈನ್, ಮೋಡೆಲ್ ಹಾಗೂ ಕಂಪೆನಿಗಳ ಆಯ್ಕೆ ಮುಕ್ತವಾಗಿದೆ. ಜೊತೆಗೆ ಆಕರ್ಷಕ ಆಫರ್ಗಳು, ದರ ಕಡಿತ ಮಾರಾಟದ ಕೊಡುಗೆ ಮತ್ತೆ ತಡವೇಕೆ..?
ಸಫಲ ಉದ್ಯಮಕ್ಕೆ ಬನ್ನಿ.. ಜೀವನ ಸಾಫಲ್ಯದೆಡೆಗೆ ಸಾಗಿ..!

ಡಿಶ್ವಾಶರ್ಗೆ ಭಾರೀ ಬೇಡಿಕೆ:
ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಪೈಕಿ ಅದ್ಭುತ ಹಾಗು ಅತ್ಯಾಧುನಿಕ ಸಂಶೋಧನೆ ‘ಡಿಶ್ವಾಶರ್’ಗಳು. ಅಂದರೆ ಮನೆಯಲ್ಲಿ ಪಾತ್ರೆಗಳನ್ನು ತೊಳೆದು ಶುಚಿಗೊಳಿಸುವ ಈ ಡಿಶ್ವಾಶರ್ ಯಂತ್ರಗಳಿಗೆ ಇನ್ನಿಲ್ಲದ ಬೇಡಿಕೆ. ಬೋಶ್, ಎಲ್ಜಿ ಮತ್ತಿತರ ಕಂಪೆನಿಗಳ ಡಿಶ್ವಾಶರ್ಗಳಿಗೆ ಭಾರೀ ಬೇಡಿಕೆ ಇದೆ ಎಂದು ಸಫಲ ಉದ್ಯಮದ ಪಾಲುದಾರರಾರು ಹೇಳುತ್ತಾರೆ.

ಅತ್ಯಲ್ಪ ಅವಧಿಯಲ್ಲಿ ತಮ್ಮ ಸಂಸ್ಥೆಗೆ ಅಪಾರ ಬೆಂಬಲ ನೀಡಿದ ಗ್ರಾಹಕರಿಗೆ ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಫಲ ಉದ್ಯಮದ ಪಾಲುದಾರರಾದ ಮಹೇಶ್ ಮೇರ್ಕಜೆ, ಸತೀಶ್ ಕಾಟೂರು, ಮಹೇಶ್ ಉಗ್ರಾಣಿಮನೆ, ಸತೀಶ್ ಹೊದ್ದೆಟ್ಟಿ ಹಾಗೂ ಧನಪಾಲ ಗೂನಡ್ಕ, ವ್ಯವಸ್ಥಾಪಕರಾದ ರಜತ್ ರಾವ್ ಹಾಗೂ ಸಿಬ್ಬಂದಿಗಳು ಹೇಳುತ್ತಾರೆ.








