ಮಂಗಳೂರು:ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ವಾರ್ಷಿಕವಾಗಿ ಕೊಡಮಾಡುವ ಸಾಧನಾ ರಾಜ್ಯ ಪ್ರಶಸ್ತಿ ಘೋಷಿಸಲಾಗಿದೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ವಿದುಷಿ ವಿಭಾ ಶ್ರೀನಿವಾಸ್ ನಾಯಕ್ ಇವರಿಗೆ ಸಾಧನಾ ರಾಜ್ಯ ಯುವ ಪ್ರಶಸ್ತಿ ಲಭಿಸಿದೆ. ಪತ್ರಿಕೋದ್ಯಮ ಕ್ಷೇತ್ರದ ಸೇವೆಗಾಗಿ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಪಿ.ಬಿ.ಹರೀಶ್ ರೈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಧಾರ್ಮಿಕ ಮತ್ತು ಮಹಿಳಾ ಸಬಲೀಕರಣ ವಿಭಾಗದ

ಸೇವೆಗಾಗಿ ಡಾ. ಹೇಮಾವತಿ ವಿ. ಹೆಗ್ಗಡೆ ಧರ್ಮಸ್ಥಳ, ಹಿರಿಯ ಚಿತ್ರನಟ ಎಸ್. ದೊಡ್ಡಣ್ಣ,ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಂಚಾಲಕ ಎಂ.ಜಿ.ಆರ್ ಅರಸ್ ಮೈಸೂರು, ಕರ್ಣಾಟಕ ಬ್ಯಾಂಕಿನ ಎಂಡಿ ಮತ್ತು ಸಿಇಒ ಎಂ.ಎಸ್ ಮಹಾಬಲೇಶ್ವರ ಭಟ್, ಯಕ್ಷಗಾನ ಕಲಾವಿದ ಸೀತಾರಾಮ್ ಕಟೀಲು,ಅನಂತ ಪ್ರಕಾಶ ಮಾಸಿಕ ಪತ್ರಿಕೆ ಸಂಪಾದಕ ಹಾಗೂ ಅನಂತ ಪ್ರಕಾಶಾನದ ಮುಖ್ಯಸ್ಥ ಕೆ. ಸಚ್ಚಿದಾನಂದ ಉಡುಪ,
ಯಕ್ಷಗಾನ ಮತ್ತು ಜಾನಪದ ಕ್ಷೇತ್ರದ ಸಾಧಕ ಕದ್ರಿ ನವನೀತ್ ಶೆಟ್ಟಿ, ರಂಗಭೂಮಿ ಕ್ಷೇತ್ರದ ಸಾಧಕ ಅರೆಹೊಳೆ ಸದಾಶಿವ ರಾವ್ ಅವರಿಗೆ ಪ್ರಶಸ್ತಿ ಲಭಿಸಿದೆ.ಜಗದೀಶ್ಚಂದ್ರ ಸೂಟರ್ಪೇಟೆ ಅವರಿಗೆ ಸಾಧನಾ ರಾಜ್ಯ ವಿಶೇಷ ಪುರಸ್ಕಾರ,ಬಹುಮುಖ ಪ್ರತಿಭೆಯ ಕಲಾವಿದೆ ಲಾಲಿತ್ಯ ಬೇಲೂರು ಅವರಿಗೆ ‘ಸಾಧನಾ ರಾಜ್ಯ ಬಾಲ ಪುರಸ್ಕಾರ ಲಭಿಸಿದೆ.
ಸಂಘ ಸಂಸ್ಥೆ ವಿಭಾಗದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಜೈ ತುಲುನಾಡ್ ಸಂಸ್ಥೆಗೆ ಈ ಬಾರಿಯ ಸಾಧನಾ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಾ. ವೀ ಕೃಷ್ಣದಾಸ್ ಗುರುವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2021ನೇ ಸಾಲಿನ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರವನ್ನು ರಘು ಇಡ್ಕಿದು ಅವರಿಗೆ ಪ್ರದಾನ ಮಾಡಲಾಗುವುದು ಮತ್ತು 2021-22ನೇ ಸಾಲಿನ ಕಥಾಯಜ್ಞ ರಾಷ್ಟ್ರೀಯ ಪುರಸ್ಕಾರವನ್ನು ಬೆಂಗಳೂರಿನ ಹಿರಿಯ ಕಥೆಗಾರ ಎ ಎನ್ ಪ್ರಸನ್ನ ಅವರಿಗೆ ನೀಡಲಾಗುವುದು.ಪ್ರಶಸ್ತಿ ಪ್ರದಾನ ಸಮಾರಂಭವು ಫೆ 26ರಂದು ಮಂಗಳೂರಿನ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜರುಗುವ ನಾಡು ನುಡಿ ಸಾಹಿತ್ಯ ಸಮ್ಮೇಳನದಲ್ಲಿ ಸಂಜೆ 4 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು.