ಸುಳ್ಯ:ಎಸ್ ಎಸ್ ಎಫ್ ವತಿಯಿಂದ ಸುಳ್ಯ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಡಿಸೆಂಬರ್ 31 ರಂದು ಬೆಳ್ಳಾರೆ ತಂಬಿನಮಕ್ಕಿ ದಾರುಲ್ ಹುದಾ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ ಎಂದು ಎಸ್ಎಸ್ಎಫ್ ಸುಳ್ಯ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯ ಅಹಮದ್ ಕಬೀರ್ ಜಟ್ಟಿಪಳ್ಳ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಸುಳ್ಯದ
25 ಶಾಖೆಗಳ 4 ಸೆಕ್ಟರ್ಗಳಿಂದ 300ಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಲಿದ್ದಾರೆ. ಐದು ವಿಭಾಗಗಳಲ್ಲಿ 118 ಸ್ಪರ್ಧೆಗಳು ನಡೆಯಲಿದೆ ಎಂದು ಹೇಳಿದರು. ಡಿಸೆಂಬರ್ 31ರಂದು ಬೆಳಿಗ್ಗೆ 8.30ಕ್ಕೆ ದಾರುಲ್ ಹುದಾ ತಂಬಿನಮಕ್ಕಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಖಲೀಲ್ ಹಿಮಮಿ ಸಖಾಫಿ ಧ್ವಜಾರೋಹಣ ನೆರವೇರಿಸುವರು. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಅಬುದಾಬಿ ಝೋನಲ್ ಅಧ್ಯಕ್ಷ ಹಸೈನಾರ್ ಅಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಎಸ್ಎಫ್ ಸಾಹಿತ್ಯೋತ್ಸವ ಸಮಿತಿಯ ಚೆಯರ್ಮೆನ್ ಅಬೂಬಕ್ಕರ್ ಸಿದ್ದಿಕ್ ಹಿಮಮಿ ಸಖಾಫಿ ಹಾಗೂ ಎಸ್ಎಸ್ಎಫ್ ಸುಳ್ಯ ಡಿವಿಷನ್ ಮೀಡಿಯಾ ಕನ್ವೀನರ್ ಕಬೀರ್ ಹಿಮಮಿ ಸಖಾಫಿ, ಸಾಹಿತ್ಯೋತ್ಸವ ಸಮಿತಿಯ ಕನ್ವೀನರ್ ಅಬೂಬಕ್ಕರ್ ಸಿದ್ದಿಕ್ ಎಲಿಮಲೆ, ಕೋಶಾಧಿಕಾರಿ ಶರೀಫ್ ಜಯನಗರ ಉಪಸ್ಥಿತರಿದ್ದರು.












