ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸನ್ನಿಧಾನ
ಅಯ್ಯಪ್ಪ ಸ್ವಾಮಿ ಸನ್ನಿಧಿ ಶಬರಿಮಲೆಯಲ್ಲಿ ಲಕ್ಷಾಂತರ ಮಂದಿ ಮಕರಜ್ಯೋತಿ ದರ್ಶನ ಪಡೆದರು. ಶಬರಿಮಲೆ ಮತ್ತು ಇತರ ವೀಕ್ಷಣಾ ಸ್ಥಳಗಳು ಸೇರಿದಂತೆ ಲಕ್ಷಾಂತರ ಅಯ್ಯಪ್ಪ ಭಕ್ತರು ಮಕರಜ್ಯೋತಿಯನ್ನು ವೀಕ್ಷಿಸಿದರು. ಮಕರ ಜ್ಯೋತಿ ಕಾಣುತ್ತಿದ್ದಂತೆ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಶರಣಂ ಕರೆದು ಜ್ಯೋತಿಯ ದರ್ಶನ ಪಡೆದರು. ಪಂದಳಂದಿಂದ ತರಲಾದ ತಿರುವಾಭರಣಂ ಅಯ್ಯಪ್ಪ ವಿಗ್ರಹದಲ್ಲಿ
ತೊಡಿಸಿ ಅಲಂಕಾರಗೊಂಡು ದೀಪಾರಾಧನೆಯ ನಂತರ 6:30ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ಪೊನ್ನಂಬಲಮೇಡದಲ್ಲಿ ಮಕರಜ್ಯೋತಿ ಬೆಳಗಿತು. ಪೊನ್ನಂಬಲ ಮೇಡಿನಲ್ಲಿ ಮಕರಜ್ಯೋತಿ ಮೂರು ಬಾರಿ ಬೆಳಗಿತು. ಸೋಮವಾರ ಸಂಜೆ 5 ಗಂಟೆಗೆ ಗರ್ಭಗುಡಿ ತೆರೆಯಲಾಯಿತು. ಪಂದಳಂನಿಂದ ಆರಂಭವಾದ ತಿರುವಾಭರಣ ಮೆರವಣಿಗೆಯನ್ನು ದೇವಸ್ವಂ ಅಧಿಕಾರಿಗಳು ಶರಂಕುತ್ತಿಯಲ್ಲಿ ಬರಮಾಡಿಕೊಂಡರು. ಅಯ್ಯಪ್ಪನಿಗೆ ತೊಡುವ ತಿರುವಾಭರಣವನ್ನು ದೇವಸ್ವಂ ಅಧಿಕಾರಿಗಳು ಸ್ವೀಕರಿಸಿದ ನಂತರ ಮೆರವಣಿಗೆಯು ಸನ್ನಿಧಾನಕ್ಕೆ ತೆರಳಿತು.18 ಮೆಟ್ಟಿಲು ಹತ್ತಿ ಸೋಪಾನಂ ತಲುಪಿದ ಬಳಿಕ ತಂತ್ರಿ ಮತ್ತು ಮೇಲ್ಶಾಂತಿ ಸೇರಿ ತಿರುವಾಭರಣವನ್ನು ಸ್ವೀಕರಿಸಿ ಅಯ್ಯಪ್ಪ ಮೂರ್ತಿಗೆ ತೊಡಿಸುತ್ತಾರೆ. ನಂತರ ದೀಪಾರಾಧನೆ ನಡೆಯಿತು.ಶರಣ ಘೋಷಗಲೊಂದಿಗೆ ಎಲ್ಲೆಡೆ ಅಯ್ಯಪ್ಪ ಭಕ್ತರು ನೆರೆದಿದ್ದರ









