ಶಬರಿಮಲೆ: ಕೆ.ಜಯರಾಮನ್ ನಂಬೂತಿರಿ ಅವರು ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಇವರು ಕಣ್ಣೂರು ತಳಿಪರಂಬದವರು. ವೈಕಮ್ ಇಂಡಮ್ತುರುತ್ತಿ ಮನ ಹರಿಹರನ್ ನಂಬೂತಿರಿ ಅವರು ಮಾಳಿಕಪ್ಪುರಂ ಕ್ಷೇತ್ರದ ಪ್ರಧಾನ
ಅರ್ಚಕರಾಗಿ ಆಯ್ಕೆಯಾದರು. ತಂತ್ರಿ ಕಂಠರರ್ ರಾಜೀವರ್, ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತ ಗೋಪನ್, ದೇವಸ್ವಂ ಆಯುಕ್ತ ಬಿ.ಎಸ್.ಪ್ರಕಾಶ್, ವೀಕ್ಷಕ ನ್ಯಾಯಮೂರ್ತಿ ಭಾಸ್ಕರನ್, ವಿಶೇಷ ಆಯುಕ್ತ ಎಂ.ಮನೋಜ್ ನೇತೃತ್ವದಲ್ಲಿ ಈ ಆಯ್ಕೆ ನಡೆಯಿತು. ಪಂದಳಂ ಅರಮನೆಯ ಕೃತಿಕೇಶ್ ವರ್ಮಾ ಮತ್ತು ಶಬರಿಮಲೆಯ ಹಾಗು ಪೌರ್ಣಮಿ ಜಿ. ವರ್ಮ ಮಾಳಿಕಪುರಂ ಪ್ರಧಾನ ಅರ್ಚಕರ ಆಯ್ಕೆಗೆ ಚೀಟಿ ಎತ್ತಿದರು. ಒಂದು ವರ್ಷದ ಅವಧಿಗೆ ಪ್ರಧಾನ ಅರ್ಚಕರ ಆಯ್ಕೆ ನಡೆದಿದೆ.