ಶಬರಿಮಲೆ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಕ್ಷೇತ್ರದ ಮುಖ್ಯ ಅರ್ಚಕರಾಗಿ ಪಿ.ಎನ್.ಮಹೇಶ್ ಆಯ್ಮೆಯಾಗಿದ್ದಾರೆ. ಮಾಳಿಕಪುರಂ ಕ್ಷೇತ್ರದ ಮುಖ್ಯ ಅರ್ಚಕರಾಗಿ ಪಿ.ಜಿ.ಮುರಳಿ ಆಯ್ಕೆಯಾದರು. ಮೂವಾಟ್ಟುಪುಯ ಏನಾನಲ್ಲೂರ್ನವರಾದ ಮಹೇಶ್ ಪ್ರಸ್ತುತ
ತ್ರಿಶೂರ್ ಪಾರಮೇಕಾವ್ ಕ್ಷೇತ್ರದ ಅರ್ಚಕರಾಗಿದ್ದಾರೆ. ಗುರುವಾಯೂರ್ ಮೂಲದವರಾದ ಪಿ.ಜಿ.ಮುರಳಿ ಹೈದರಾಬಾದ್ ಸೋಮಾಜಿಗುಡ ಅಯ್ಯಪ್ಪ ದೇವಾಲಯದ ಅರ್ಚಕರಾಗಿದ್ದಾರೆ. ಪಂದಳಂ ರಾಜಮನೆತನದ ಮಕ್ಕಳಾದ ವೈದೇಹ್ ವರ್ಮ, ನಿರುಪಮಾ ವರ್ಮ ಚೀಟಿ ಎತ್ತುವ ಮೂಲಕ ಆಯ್ಕೆ ನಡೆಸಲಾಯಿತು. ಶಬರಿಮಲೆ ಮುಖ್ಯ ಅರ್ಚಕರ ಸ್ಥಾನಕ್ಕೆ 17 ಹಾಗೂ ಮಾಳಿಕಪುರಂ ಕ್ಷೇತ್ರದ ಮುಖ್ಯ ಅರ್ಚಕರ ಸ್ಥಾನಕ್ಕೆ 12 ಮಂದಿಯ ಪಟ್ಟಿ ತಯಾರಿಸಲಾಗಿತ್ತು. ಚೀಟಿ ಎತ್ತುವ ಮೂಲಕ ಆಯ್ಕೆ ನಡೆಸಲಾಗುತ್ತದೆ. ಮುಂದಿನ ಒಂದು ವರ್ಷದ ಕಾಲ ಇವರು ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ.
ತುಲಾ ಸಂಕ್ರಮಣ ಪೂಜೆಗಾಗಿ ಶಬರಿಮಲೆ ಕ್ಷೇತ್ರದ ಬಾಗಿಲು ಅ.17 ರಂದು ಸಂಜೆ ತೆರೆಯಲಾಗಿದೆ. 22ರವರೆಗೆ ಕ್ಷೇತ್ರದ ಬಾಗಿಲು ತೆರೆದಿರುತ್ತದೆ.