ಶಬರಿಮಲೆ:ಶಬರಿಮಲೆ ಅಯ್ಯಪ್ಪ ದೇವಾಲಯಲ್ಲಿ ಬುಧವಾರ ಮಂಡಲ ಪೂಜೆ ನಡೆಯಿತು. ತುಂಬಿ ತುಳುಕಿದ ಸಹಸ್ರಾರು ಮಂದಿ ಭಕ್ತರು ಮಂಡಲ ಪೂಜೆಗೆ ಸಾಕ್ಷಿಯಾಗಿ ಅಯ್ಯಪ್ಪನ ದರ್ಶನ ಪಡೆದು ಧನ್ಯರಾದರು.ದೇವಾಲಯದ ತಂತ್ರಿ ಕಂಡರಾರು ಮಹೇಶ್ ಮೋಹನಾರು ಅವರ ನೇತೃತ್ವದಲ್ಲಿ ಅಯ್ಯಪ್ಪ ದೇವರ ವಿಗ್ರಹಕ್ಕೆ ‘ತಂಗ ಅಂಗಿ’ಯ (ಚಿನ್ನಾಭರಣ) ಅಲಂಕಾರ ಮಾಡಿ, ಮಂಡಲ ಪೂಜೆಯನ್ನು
ನೆರವೇರಿಸಲಾಯಿತು. ‘ತಂಗ ಅಂಗಿ’ಯನ್ನು ಮಂಗಳವಾರ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಗಿತ್ತು.
‘ಕಳಶಾಭಿಷೇಕ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನಡೆದವು.
ಕೇರಳ, ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಗಂಟೆಗಟ್ಟಲೆ ಸರದಿಯಲ್ಲಿ ನಿಂತಿದ್ದರು ದೇವರ ದರ್ಶನ ಪಡೆದರು. ‘ಕೆಲವು ದಿನಗಳಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದೆ. ಮಕರವಿಳಕ್ಕು ಸಂದರ್ಭದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ ಮಂಡಲ ಪೂಜೆಯ ಬಳಿಕ ರಾತ್ರಿ ದೇವಾಲಯದ ಬಾಗಿಲು ಮುಚ್ಚಲಾಗುವುದು. ಇದೇ 30ರಂದು ಮತ್ತೆ ತೆರೆಯಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಕ್ತರ ಸಂಖ್ಯೆ ಹಾಗೂ ಆದಾಯ ಹೆಚ್ಚಿದೆ.








