ಮುಂಬೈ:ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಇಂದು ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಹಾಗೂ ಶಕಿಬ್ ಅಹ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಇದುವರೆಗೆ ಒಟ್ಟು
ನಾಲ್ಕು ಪಂದ್ಯಗಳನ್ನು ಆಡಿದೆ. ಇದರಲ್ಲಿ ಆಫ್ರಿಕಾ ಮೂರು ಜಯ, ಒಂದು ಸೋಲಿನೊಂದಿಗೆ 6 ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಬಾಂಗ್ಲಾ ಮೂರು ಸೋಲುಂಡು ಆರನೇ ಸ್ಥಾನದಲ್ಲಿದೆ. ಆಫ್ರಿಕಾ ಇಂದಿನ ಪಂದ್ಯ ಗೆದ್ದರೆ ಟಾಪ್ 2ಗೆ ಏರಲಿದೆ. ಹರಿಣಗಳ ಪಡೆ ಅಚ್ಚರಿ ಎಂಬಂತೆ ನೆದರ್ಲೆಂಡ್ಸ್ ವಿರುದ್ಧ ಸೋತಿದ್ದು ಬಿಟ್ಟರೆ ಉಳಿದ ತಂಡಗಳ ವಿರುದ್ಧ ಡೊಡ್ಡ ಅಂತರದ ಜಯ ಕಂಡಿದೆ. ಅದರಲ್ಲೂ ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ದಾಖಲೆಯ 229 ರನ್ಗಳಿಂದ ಗೆದ್ದು ಬೀಗಿತ್ತು.