ಮುಲ್ಲನಪುರ: ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಭಾರತ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ 51 ರನ್ಗಳ ಅಂತರದಲ್ಲಿ ಜಯ ಸಾಧಿಸಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಫ್ರಿಕಾ ಪರ
ಡಿ ಕಾಕ್ ಅಬ್ಬರಿಸಿದರು.ಅವರು ಕೇವಲ 46 ಎಸೆತಗಳಲ್ಲಿ 90 ರನ್ ಗಳಿಸಿಸಿದರು. ಅವರ ಇನಿಂಗ್ಸ್ನಲ್ಲಿ 7 ಸಿಕ್ಸ್ ಮತ್ತು 5 ಬೌಂಡರಿಗಳಿದ್ದವು.ನಾಯಕ ಏಡನ್ ಮರ್ಕ್ರಂ (29), ಡಿ. ಫೆರಾರಿಯಾ (30) ಹಾಗೂ ಡೇವಿಡ್ ಮಿಲ್ಲರ್ (20) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಹೀಗಾಗಿ, ಹರಿಣಗಳ ಪಡೆ ನಿಗದಿತ ಓವರ್ಗಳಲ್ಲಿ 4 ವಿಕೆಟ್ಗೆ 213 ರನ್ ಕಲೆಹಾಕಿತು.214 ರನ್ಗಳ ಗುರಿ ಬೆನ್ನತ್ತಿದ್ದ ಭಾರತ, 19.1 ಓವರ್ನಲ್ಲಿ 162ರನ್ ಗಳಿಸಿ ಆಲ್ ಔಟ್ ಆಗಿ ಸೋಲೊಪ್ಪಿಕೊಂಡಿತು.
ಅರ್ಧ ಶತಕ ಸಿಡಿಸಿದ ತಿಲಕ್ ವರ್ಮ(62) ಮಾತ್ರ ಹೋರಾಟ ನಡೆಸಿದರು.ಉಳಿದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಭಿಷೇಕ್ ವರ್ಮ (17), ಶುಭಮನ್ ಗಿಲ್ (0), ಸೂರ್ಯಕುಮಾರ್ ಯಾದವ್(5), ಹಾರ್ದಿಕ್ ಪಾಂಡ್ಯ(20), ಜಿತೇಶ್ ಶರ್ಮ(27), ಶಿವಂ ದುಬೆ(1) ರನ್ ಗಳಿಸಿದರು.













