ಅಹಮದಾಬಾದ್: ವೇಗಿ ಲುಂಗಿ ಎನ್ಗಿಡಿ (31ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿ ಮತ್ತು ನಾಯಕ ಏಡನ್ ಮರ್ಕರಂ (59;32ಎ) ಅವರ ಮಿಂಚಿನ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ 57 ರನ್ಗಳಿಂದ ಕೆನಡಾ ತಂಡವನ್ನು ಸುಲಭವಾಗಿ ಮಣಿಸಿತು. 214 ರನ್ಗಳ ಕಠಿಣ ಗುರಿಯನ್ನು
ಬೆನ್ನಟ್ಟಿದ ಕೆನಡಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗೆ 156 ರನ್ ಗಳಿಸಿ ಹೋರಾಟ ಮುಗಿಸಿತು.
ಸಂಕ್ಷಿಪ್ತ ಸ್ಕೋರು:
ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 4 ವಿಕೆಟ್ಗೆ 213 (ಏಡನ್ ಮರ್ಕರಂ 59, ಕ್ವಿಂಟನ್ ಡಿಕಾಕ್ 25, ರಿಯಾನ್ ರಿಕಲ್ಟನ್ 33, ಡೇವಿಡ್ ಮಿಲ್ಲರ್ ಔಟಾಗದೇ 39, ಟ್ರಿಸ್ಟನ್ ಸ್ಟಬ್ಸ್ ಔಟಾಗದೇ 34; ಅಂಶ್ ಪಟೇಲ್ 31ಕ್ಕೆ 3).ಕೆನಡಾ: 20 ಓವರ್ಗಳಲ್ಲಿ 8 ವಿಕೆಟ್ಗೆ 156 (ನವನೀತ್ ಧಲಿವಾಲ್ 64, ಹರ್ಷ್ ಥಾಕರ್ 33; ಲುಂಗಿ ಎನ್ಗಿಡಿ 31ಕ್ಕೆ 4, ಮಾರ್ಕೊ ಯಾನ್ಸೆನ್ 30ಕ್ಕೆ 2). ಪಂದ್ಯದ ಆಟಗಾರ: ಲುಂಗಿ ಎನ್ಗಿಡಿ
ಇನ್ನೊಂದು ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಒಮಾನ್ ವಿರುದ್ಧ ಎಂಟು ವಿಕೆಟ್ಗಳ ಸುಲಭ ಜಯ ಸಾಧಿಸಿತು.
ಒಮಾನ್ 19.5 ಓವರ್ಗಳಲ್ಲಿ 103 ರನ್ ಗಳಿಸಿತು. ಜಿಂಬಾಬ್ವೆ ತಂಡವು 39 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ಗೆ 106 ರನ್ ಗಳಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಬ್ರಿಯಾನ್ ಅವರು 36 ಎಸೆತಗಳಲ್ಲಿ ಔಟಾಗದೇ 48 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು:
ಒಮಾನ್: 19.5 ಓವರ್ಗಳಲ್ಲಿ 103 (ವಿನಾಯಕ ಶುಕ್ಲಾ 28, ರಿಚರ್ಡ್ ನ್ಗರವಾ 17ಕ್ಕೆ 3, ಬ್ಲೇಸಿಂಗ್ ಮುಜರಬಾನಿ 16ಕ್ಕೆ 3, ಬ್ರಾಡ್ ಇವಾನ್ಸ್ 18ಕ್ಕೆ 3.
ಜಿಂಬಾಬ್ವೆ: 13.3 ಓವರ್ಗಳಲ್ಲಿ 2 ವಿಕೆಟ್ಗೆ 106 (ಬ್ರಿಯಾನ್ ಬೆನೆಟ್ ಔಟಾಗದೇ 48; ಸುಫ್ಯಾನ್ ಮೊಹಮೂದ್ 12ಕ್ಕೆ 2).







