ಸುಳ್ಯ:ಮಾನವ ಜನ್ಮ ಶ್ರೇಷ್ಠವಾದುದು. ಅದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮಾನವರು ಒಂದೇ ಎಂಬ ಭಾವನೆ ಮೂಡಿದರೆ ನಮ್ಮಲ್ಲಿ ಪ್ರೀತಿ, ವಿಶ್ವಾಸ ಮತ್ತು ಸ್ನೇಹ ಬೆಳೆಯಲು ಸಾಧ್ಯ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ. ಎಲಿಮಲೆಯ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಇದರ ರೂಬಿ ಜ್ಯುಬಿಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಸ್ಥೆಯ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ಎಂಬುದು ಶಾಂತಿ ಮತ್ತು
ಸುರಕ್ಷತೆಯ ನೆಲೆವೀಡು ವಿಶ್ವಕ್ಕೆ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ದೇಶ.ಇಲ್ಲಿ ಎಲ್ಲರಲ್ಲಿಯೂ ಧಾರ್ಮಿಕ ಭಾವನೆ ಗಟ್ಟಿಯಾಗಿರುವ ಕಾರಣ ನಮ್ಮ ದೇಶ ವಿಶ್ವಕ್ಕೇ ಮಾದರಿಯಾಗಿದೆ. ನಮ್ಮ ಧರ್ಮವನ್ನೂ, ಧರ್ಮ ಗ್ರಂಥಗಳನ್ನೂ ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ನಿಜವಾದ ಮಾನವರಾಗುತ್ತೇವೆ. ಆದುದರಿಂದ ಎಲ್ಲಾ ಧರ್ಮಗಳೂ ಸೌಹಾರ್ದತೆಯಿಂದ ಬದುಕಬೇಕು ಎಂದು ಅವರು ಹೇಳಿದರು.

ಕುಂಬ್ರ ಮರ್ಕಝುಲ್ ಹುದಾ ಇದರ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಅಬ್ದುಲ್ ರಸೀದ್ ಝೈನಿ ಅಲ್ ಕಾಮಿಲ್ ಸಂದೇಶ ಭಾಷಣ ಮಾಡಿದರು. ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಬಾಳಿದರೆ ನಾಡಿನ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ಎಲಿಮಲೆ ಬದ್ರಿಯಾ ಜಮಾ ಅತ್ನ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಎಸ್ಜೆಯು ಅಧ್ಯಕ್ಷ ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ದುವಾ ನೆರವೇರಿಸಿದರು.

ಮುಜೀಬುಲ್ಲಾ ಜಫಾರಿ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್.ಕೆ,
ವಕ್ಫ್ ಅಧಿಕಾರಿ ಅಬೂಬಕ್ಕರ್, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಮೀಪ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ.ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಎಂ.ಬಿ.ಪೌಂಢೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಭರತ್ ಮುಂಡೋಡಿ, ಸಯ್ಯದ್ ಮೀರಾ ಸಾಹೇಬ್ ಕಡಬ, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ,ಜಾವಗಲ್ ದರ್ಗಾ ಶರೀಫ್ ಅಧ್ಯಕ್ಷ ಇಸಾಕ್ ಸಾಹೇಬ್ ಪಾಜಪಳ್ಳ,
ನ.ಪಂ.ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕಾರ್,ಪ್ರಮುಖರಾದ ಆದಂ ಹಾಜಿ ಕಮ್ಮಾಡಿ, ಕೆ.ಪಿ.ಜಾನಿ ಕಲ್ಲುಗುಂಡಿ, ರಝಾಕ್ ಹಾಜಿ ರಾಜಧಾನಿ, ಅಬ್ದುಲ್ ಮಜೀದ್ ಜನತಾ, ಅಬ್ದುಲ್ ಶುಕ್ಕೂರ್, ಜಲೀಲ್ ಬೈತ್ತಡ್ಕ, ಎಂ.ಎ.ಜೋಸೆಫ್, ಆಲಿ.ಟಿ.ಎಸ್, ಗ್ರಾ.ಪಂ.ಸದಸ್ಯ ವೇಣುಗೋಪಾಲ ಪುನ್ಕುಟ್ಟಿ, ಶಿಕ್ಷಕರಾದ ಗೋಪಿನಾಥ ಮೆತ್ತಡ್ಕ, ಶ್ರೀಧರ ಗೌಡ, ಜಯಾನಂದ ಪಟ್ಟೆ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿದರು. ಅಬ್ದುಲ್ಲಾ ಹಿಮಮಿ ಸಖಾಫಿ, ಮಹಮ್ಮದ್ ಸಖಾಫಿ ಹಾಗೂ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.









