ಸುಳ್ಯ: ರಬ್ಬರ್ ಬೆಲೆ ಕುಸಿತದಿಂದ ಕಂಗಾಲಾಗಿರುವ ಕರ್ನಾಟಕ ಭಾಗದ ರಬ್ಬರ್ ಕೃಷಿಕರಿಗೆ ನೆರವು ನೀಡಲು ರಬ್ಬರ್ ಕೃಷಿಗೆ ಕರ್ನಾಟಕ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಲು ಪ್ರಯತ್ನ ನಡೆಸಬೇಕು ಎಂದು ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದ ಪ್ರಮುಖರು ಹಾಗೂ ಕಾಂಗ್ರೆಸ್ ಮುಖಂಡರು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ
ಸಲ್ಲಿಸಲಾಯಿತು. ಕರಿಕೆಯಲ್ಲಿ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಕೃಷಿಕರು ರಬ್ಬರ್ ಬೆಳೆಯುತ್ತಿದ್ದಾರೆ.ಆದರೆ ಬೆಲೆ ಕುಸಿತದಿಂದಾಗಿ ಕಳೆದ 10 ವರ್ಷಗಳಿಂದ ಕೃಷಿಕರು ತೀವ್ರ ನಷ್ಟ ಅನುಭಿವಿಸುತ್ತಿದ್ದಾರೆ. ಆದುದರಿಂದ ರಬ್ಬರ್ಗೆ ಕೆಜಿಗೆ ಕನಿಷ್ಠ 250 ರೂ ದೊರಕುವಂತೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕೇರಳ ಸರಕಾರ ಈಗಾಗಲೇ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿ ರಬ್ಬರ್ ಕೃಷಿಕರಿಗೆ ಬೆಂಬಲ ಬೆಲೆ ನೀಡುತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರಬ್ಬರ್ಗೆ ಬೆಂಬಲ ಬೆಲೆ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಯಿತು.
ನಿಯೋಗದಲ್ಲಿ ಪ್ರಮುಖರಾದ ಬಿ.ಸಿ.ಜಯರಾಮ, ಮೈಕಲ್ ಪೂವತ್ತಾನಿ, ದೇವರಾಜ್ ಬೇಕಲ್, ಜೆಯಿಂಸ್ , ಬಾಲಚಂದ್ರನ್ ನಾಯರ್, ರಮಾನಾಥ್ ಕರಿಕೆ ಮತ್ತಿತರರು ಇದ್ದರು.