ಸುಳ್ಯ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಿನ್ನಲೆಯಲ್ಲಿ ದೇಶದಾದ್ಯಂತ ಆರ್ಎಸ್ಎಸ್ ವತಿಯಿಂದ ವಿಜಯದಶಮಿಯಂದು ಮಂಡಲ ಸಾಂಘಿಕ್ ನೆಡೆಯಿತು.ಸುಳ್ಯ ತಾಲೂಕಿನ 14 ಮಂಡಲಗಳಲ್ಲಿ ಸಾಂಘಿಕ್ ನಡೆಯಿತು. ಪ್ರಮುಖರು ಬೌದ್ಧಿಕ್ ನೀಡಿದರು. ಕಾರ್ಯಕ್ರಮ ದಲ್ಲಿ ನೂರಾರು
ಸ್ವಯಂ ಸೇವಕರು, ಸಾರ್ವಜನಿಕರು ಭಾಗಿಯಾಗಿದ್ದರು.
ಅಡ್ಕಾರು ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದ ಜಾಲ್ಸೂರು ಮಂಡಲ ಸಾಂಘಿಕ್ನಲ್ಲಿ ಮುಖ್ಯ ವಕ್ತಾರರಾಗಿ ಪ್ರಾಂತ್ಯ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರು ಮಾತನಾಡಿ ಆರ್ಎಸ್ಎಸ್ ಕಳೆದ ನೂರು ವರ್ಷಗಳಿಂದ ಸಮಾಜದ ನಡುವೆ ಕೆಲಸ ಮಾಡುತ್ತ ಬಂದಿದೆ. ಕಾರ್ಯಕರ್ತರ ನಿಸ್ವಾರ್ಥ ಕಾರ್ಯದ ಪರಿಣಾಮ ಇಂದು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಸಮಾಜ ಸಂಘವನ್ನು ಸ್ವೀಕರಿಸುವಂತೆ, ಒಪ್ಪಿಕೊಳ್ಳುವಂತೆ ಬೆಳೆದಿದೆ ಎಂದರು.

ಪಂಚ ಪರಿವರ್ತನೆ ಈ ಶತಾಬ್ದಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಕುಟುಂಬ ಪ್ರಭೋದನೆ ನಾಗರೀಕ ಶಿಷ್ಟಚಾರ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾಜ ಈ ಎಲ್ಲಾ ಕಾರ್ಯದಲ್ಲಿ ಭಾಗಿಯಾಗುವಂತೆ ರಾಜೇಶ್ ಪದ್ಮಾರ್ ಕರೆ ನೀಡಿದರು.












