ಚಂಡೀಗಢ: ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಯಲ್ಸ್ ರೋಚಕ ಗೆಲುವು ದಾಖಲಿಸಿತು.
ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದ ಪಂದ್ಯದಲ್ಲಿ. ರಾಯಲ್ಸ್ 3 ವಿಕೆಟ್ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ
ಪಂಜಾಬ್ 20 ಓವರುಗಳಲ್ಲಿ 8 ವಿಕೆಟ್ಗೆ 147 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಇದಕ್ಕೆ ಉತ್ತರವಾಗಿ ರಾಯಲ್ಸ್ ಒಂದು ಎಸೆತ ಇರುವಂತೆ 7 ವಿಕೆಟ್ಗೆ 152 ರನ್ ಹೊಡೆಯಿತು.
ರಾಜಸ್ಥಾನ್ ರಾಯಲ್ಸ್ ತಂಡದ ಶಿಮ್ರೋನ್ ಹೆಟ್ಮೆಯರ್ ಕೊನೆಗಳಿಗೆಯ ಬೀಸಾಟದಿಂದ ಅಜೇಯ 27 ರನ್ ಸಿಡಿಸಿದರು.
ರಾಜಸ್ಥಾನ್ ರಾಯಲ್ಸ್ನ ಯಶಸ್ವಿ ಜೈಸ್ವಾಲ್ 28 ಎಸೆತಗಳಲ್ಲಿ 39 ರನ್ ಬಾರಿಸಿದರು.ರಾಯಲ್ಸ್ ತಂಡಕ್ಕೆ ತನುಷ್ ಕೋಟ್ಯಾನ್ ಮತ್ತು ಯಶಸ್ವಿ ಜೈಸ್ವಾಲ್ 8 ಓವರುಗಳಲ್ಲಿ 56 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು.