ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸನಿಹದ ಏನೇಕಲ್’ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟಲ್ ಮತ್ತು ರೆಸಾರ್ಟ್ ಉದ್ಘಾಟನೆಗೆ ಸಜ್ಜುಗೊಂಡಿದೆ.ಏಪ್ರಿಲ್ 3 ಬುಧವಾರ ಬೆಳಗ್ಗೆ 10.30ಕ್ಕೆ ರಾಜ್ಯ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಭಾಗವಹಿಸುವರು.ಸಮಾರಂಭದ ಅಧ್ಯಕ್ಷತೆಯನ್ನು
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಹಿಸುವರು. ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ನೆಮ್ಮದಿಯನ್ನು ಅರಸುವ ಪ್ರವಾಸಿಗರ ಹೊಸ ಡೆಸ್ಟಿನೇಷನ್ ‘ದಿ ರಾಯಲ್ ಮೊಂಟಾನಾ’ ಹೋಟೆಲ್ & ರೆಸಾರ್ಟ್ ಇದೀಗ ಕುಕ್ಕೆ ಸುಬ್ರಹ್ಮಣ್ಯದ ಸನಿಹದಲ್ಲಿ
ಪ್ರಾರಂಭವಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ ಯಾತ್ರಾ ತಾಣದಂತೆ, ಪ್ರವಾಸಿ ತಾಣವೂ ಹೌದು. ಹೀಗೆ ಬರುವ ಪ್ರವಾಸಿಗರಿಗೆ ಅಲ್ಲಿಂದ ಕೇವಲ ಆರು ಕಿ.ಮೀ. ದೂರದ ಏನೆಕಲ್ಲು ಗ್ರಾಮದಲ್ಲಿ ಸುಂದರ ರೆಸಾರ್ಟ್ ಕೈಬೀಸಿ ಕರೆಯುತ್ತಿದೆ. ಅದುವೇ ಡಿ ರಾಯಲ್ ಮೊಂಟಾನಾ’.ಸುಬ್ರಹ್ಮಣ್ಯ– ಪುತ್ತೂರು ರಸ್ತೆಯಲ್ಲಿ ಏನೆಕಲ್ಲು ಎಂಬ ಕಾನನದೊಳಗೆ ಹುದುಗಿದ ಊರು ಸಿಗುತ್ತದೆ. ಅದರ ಸಮೀಪದಲ್ಲೇ ಇದೆ ಬೂದಿಪಳ್ಳ ಎಂಬ ಹಸಿರು ಹೊದಿಕೆ ಹೊದ್ದ ಸುಂದರ ಪ್ರದೇಶ. ಅಲ್ಲಿಯೇ ಹೊಸದಾಗಿ ಆರಂಭಗೊಂಡಿದೆ ಡಿ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್. ಕುಮಾರಧಾರಾ ಸ್ನಾನಘಟ್ಟದಿಂದ ಇಲ್ಲಿಗೆ ಇರುವ ದೂರ ಕೇವಲ 5 ಕಿ.ಮೀ. ಮಾತ್ರ.ಮೂರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡಿರುವ ಹಾಗೂ ಪ್ರಕೃತಿ ತನ್ನ ಸೌಂದರ್ಯವೆಲ್ಲವನ್ನೂ ಇಲ್ಲೇ
ಅನಾವರಣಗೊಳಿಸುವ ರೀತಿಯ ಲ್ಯಾಂಡ್ಸ್ಕೇಪ್ ಪರಿಕಲ್ಪನೆಯಲ್ಲಿ ಈ ಹೋಟೆಲ್ & ರೆಸಾರ್ಟ್ ನಿರ್ಮಾಣವಾಗಿದೆ. ಯಾತ್ರಿಕರ ಜತೆಗೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯದ ಊಟ, ವಸತಿ, ಮನರಂಜನೆ, ಮಕ್ಕಳಿಗೆ ಆಟವಾಡುವ ಸ್ಥಳ, ಈಜುಕೊಳ ಸಹಿತ ಎಲ್ಲಾ ಸೌಲಭ್ಯಗಳೂ ಒಂದೇ ಕಡೆ ಸಿಗಬೇಕು ಎಂಬ ಪರಿಕಲ್ಪನೆಯೊಂದಿಗೆ ಅತ್ಯುತ್ತಮವಾಗಿ ತಲೆ ಎತ್ತಿ ನಿಂತಿದೆ ಏನೆಕಲ್ಲಿನ ಈ ಹೊಸ ಪ್ರವಾಸಿ ನೆಲೆ. ಆಧುನಿಕ ರೆಸಾರ್ಟ್ಗಳಲ್ಲಿ ಇರುವಂತಹ ಲಾನ್ ಏರಿಯಾ, ಪ್ಯಾಂಟ್ರಿ ಹೌಸ್, ಬ್ಯಾಂಕ್ವೆಟ್ ಹಾಲ್, ಎಸಿ ಡೈನಿಂಗ್ ಹಾಲ್ ಸಹಿತ ಊಟ, ಉಪಾಹಾರ, ಪಾನೀಯ ಸೇವನೆ, ವಿಶ್ರಾಂತಿ, ವಾಕಿಂಗ್, ಸ್ವಿಮ್ಮಿಂಗ್..ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಒಂದು ಬಾರಿ ಬಂದರೆ ಹೊರ ಪ್ರಪಂಚದ ಜಂಜಾಟಗಳನ್ನು ಮರೆತುಬಿಟ್ಟು ಹಾಯಾಗಿ ಒಂದೆರಡು ದಿನ ಇಲ್ಲೇ ಕಾಲ ಕಳೆಯುವ ಮನಸ್ಸು ಮಾಡುವುದು ನಿಶ್ಚಿತ.
ರೆಸಾರ್ಟ್ನಲ್ಲಿ ಒಟ್ಟು 29 ಕೊಠಡಿಗಳಿವೆ. ಎಸಿ ಮತ್ತು ನಾನ್ ಎಸಿ ಕೊಠಡಿಗಳಿದ್ದು, ಎಲ್ಲವೂ ವಿಶಾಲವಾಗಿವೆ, ಶುಚಿಯಾಗಿವೆ. 4 ಕಾಟೇಜ್ಗಳಿದ್ದು, ಮಡಿಕೇರಿಯ ಅನುಭವವನ್ನು ಈ ಕಾಟೇಜ್ಗಳು ಕುಕ್ಕೆಯ ಪರಿಸರದಲ್ಲಿ ನೀಡುವುದು ನಿಶ್ಚಿತ. ಬಿರು ಬೀಸಿಗೆಯಲ್ಲೂ ಕಾಡೊಳಗಿಂದ ಹರಿದು ಬರುವ ಜಲಜಲಲ ಜಲಧಾರೆ ಇಲ್ಲಿನ ಜೀವಜಲ. ಜತೆಗೆ ಕೊಳವೆಬಾವಿಯಲ್ಲೂ ನೀರು ಲಭ್ಯ ಇದೆ. 100ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಇಲ್ಲಿ ಅವಕಾಶ ಇದೆ. ಮದುವೆ, ಅತಿಥಿ ಸತ್ಕಾರ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಹಿತ ಸ್ನೇಹಿತರು, ಬಂಧುಬಳಗ ಸೇರಿಕೊಂಡು ಸಮಯ ಕಳೆಯಲು ಇಲ್ಲಿ ಸಾಕಷ್ಟು ಅವಕಾಶ ಇದೆ. ಮದುವೆಯಲ್ಲಿ ಒಂದು ಸಾವಿರ ಮಂದಿಯನ್ನು ನಿಭಾಯಿಸಬಹುದಾದಷ್ಟು ಸ್ಥಳಾವಕಾಶ ಇದ್ದು, ಅದಕ್ಕಾಗಿ ಸುಂದರ ಲಾನ್ ನಿರ್ಮಾಣವಾಗಿದೆ. ಸಣ್ಣ ಪಾರ್ಟಿಗಳಿಗೆ ಸುಮಾರು 400 ಜನರಿಗೆ ಅವಕಾಶ ಇರುವ ಪಾರ್ಟಿ ಹಾಲ್ ಸಹ ಇದೆ.
ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಿಯರು ಇಷ್ಟಪಡುವ ನಾನಾ ಬಗೆಯ ಕರಾವಳಿ ಮತ್ತು ಇತರ ಎಲ್ಲಾ ಬಗೆಯ ಅಡುಗೆಯನ್ನೂ ಸಿದ್ಧಪಡಿಸಿ ಬಡಿಸುವ ಎರಡು ಪ್ರತ್ಯೇಕ ಹೋಟೆಲ್ಗಳು ಇಲ್ಲಿವೆ. ಸಸ್ಯಾಹಾರಿ ಹೋಟೆಲ್ಗೆ ‘ಪುಳಿಚಾರ್ ವೆಜ್ ರೆಸ್ಟೋರೆಂಟ್’ ಎಂಬ ಹೆಸರು ಇಡಲಾಗಿದ್ದರೆ, ನಾನ್ವೆಜ್ ಹೋಟೆಲ್ಗೆ ‘ಪ್ಯಾರಡೈಸ್ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬ ಹೆಸರು ಇಡಲಾಗಿದೆ. ಎರಡಕ್ಕೂ ಪ್ರತ್ಯೇಕ ಕಿಚನ್ಗಳು ಇರುವುದು ವಿಶೇಷ. ಹೀಗಾಗಿ ಶುದ್ಧ ಸಸ್ಯಾಹಾರಿಗಳು ಸಹ ಇಲ್ಲಿ ಮನಸೋ ಇಚ್ಛೆ ಊಟ ಮಾಡಬಹುದು. ಈ ಭಾಗದ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಆಸ್ವಾದಿಸಲು ಬರುವವರಿಗೆ ಈ ಭಾಗದಲ್ಲಿ ನಾಲ್ಕಾರು ದಿನಗಳನ್ನು ನೆಮ್ಮದಿಯಾಗಿ ಕಳೆಯಲು ದಿ ರಾಯಲ್ ಮೊಂಟಾನಾ ರೆಸಾರ್ಟ್ ಅತ್ಯುತ್ತಮ ತಾಣ ಎಂದು ಎಂದು ದಿ.ರಾಯಲ್ ಎಂಟರ್ಪ್ರೈಸಸ್ನ ಚೆಯರ್ಮೆನ್ ಹರ್ಷ ಪುಟ್ಟಪ್ಪ ತಿಳಿಸಿದ್ದಾರೆ.