ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟಾರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ ರಾಜ್ಯ ಮಟ್ಟದ 23ನೇ ವಾರ್ಷಿಕ ಮತ್ತು 2026ನೇ ಸಾಲಿನ ಪ್ರತಿಷ್ಠಿತ “ವಂದನಾ ಪ್ರಶಸ್ತಿ”ಯನ್ನು ಖ್ಯಾತ ಪರಿಸರ ತಜ್ಞ ಡಾ.ಆರ್.ಕೆ. ನಾಯರ್ ಅವರಿಗೆ ಪ್ರದಾನ ಮಾಡಲಾಯಿತು.ನಗರದ
ಹೊಟೇಲ್ ಸೀ ವ್ಯೂವ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ದೇವದಾಸ್ ರೈ,
ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ರೈ, ಸಹಾಯಕ ಗವರ್ನರ್ ಡಾ. ಚಿನ್ನಗಿರಿ ಗೌಡ,ರೋಟರಾಕ್ಟ್ ಸಂಸ್ಥೆಯ ಮೈಸೂರು ನಗರ ಮೂಲದ ಜಿಲ್ಲಾ ಪ್ರತಿನಿಧಿ ಪ್ರಜ್ವಲ್ ಆರ್ ಮಾತನಾಡಿದರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ಭಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿವೇಕ್ ಕೋಟ್ಯಾನ್ ವರದಿ ಮಂಡಿಸಿದರು.ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಾಯನ್ ಪಿಂಟೋ, ವಲಯ ಪ್ರತಿನಿಧಿ ರವಿ ಜಲಾನ್ ಉಪಸ್ಥಿತರಿದ್ದರು.














