ಸುಳ್ಯ: ರೋಟರಿ ಕ್ಲಬ್ ಸುಳ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ 2023-24ನೇ ಸಾಲಿನ ಸೇವಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ರೋಟರಿ ಸಮುದಾಯ ಭವನದ ಮೇಲ್ಛಾವಣಿಯ ಉದ್ಘಾಟನೆ ಜ.13ರಂದು ನಡೆಯಿತು.ರೋಟರಿ ಸಮುದಾಯ ಭವನದ ಮೇಲ್ಛಾವಣಿ ಮತ್ತು ಸಭಾಭವನವನ್ನು ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್.ಕೇಶವ ಉದ್ಘಾಟಿಸಿದರು. ರೋಟರಿ ಸದಸ್ಯರ ಪ್ರಯತ್ನ ಹಾಗೂ ಸಹಕಾರದಿಂದ
ಉತ್ತಮವಾದ ರೀತಿಯಲ್ಲಿ ಸಭಾಭವನ ನಿರ್ಮಾಣಗೊಂಡಿದೆ. ಸುಳ್ಯ ರೋಟರಿ ಕ್ಲಬ್ನ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಝೋನಲ್ ಲೆಫ್ಟಿನೆಂಟ್ ನವೀನ್ ನಾಯಕ್ ,ರೋಟರಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಗಿರಿಜಾಶಂಕರ್ ತುದಿಯಡ್ಕ ಶುಭಹಾರೈಸಿದರು.

ರೋಟರಿ ಜಿಲ್ಲಾ ಯೋಜನೆಯಡಿ ಸುಳ್ಯ ಆಸುಪಾಸಿನ ಅಂಗನವಾಡಿಗಳಿಗೆ ಚಪ್ಪಲ್ ಸ್ಟ್ಯಾಂಡ್ ಹಾಗೂ ಮಿಕ್ಸಿ ವಿತರಣೆ ನಡೆಯಿತು. ಸಾಂಕೇತಿಕವಾಗಿ ಗಾಂಧಿನಗರ, ಬೂಡು ಹಾಗೂ ಕೇರ್ಪಳ ಅಂಗನವಾಡಿಗೆ ವಿತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಗಿರೀಶ್ ನಾರ್ಕೋಡು ಹಾಗೂ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ ನಾರ್ಕೋಡು ಸಭಾಭವನಕ್ಕೆ ಕ್ಲಬ್ ವತಿಯಿಂದ ನೀಡುವ ದೇಣಿಗೆಯ ಚೆಕ್ನ್ನು ಯೋಜನಾ ಸಮಿತಿ ಅಧ್ಯಕ್ಷ ಸೀತಾರಾಮ ರೈಯವರಿಗೆ ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ನೂತನ ಸಭಾಭವನಕ್ಕೆ ಸಹಕಾರ ನೀಡಿದ ಸವಣೂರು ಸೀತಾರಾಮ ರೈ, ಆನಂದ ಖಂಡಿಗ, ಪ್ರಭಾಕರ ನಾಯರ್, ಹರಿರಾಯ ಕಾಮತ್, ಗಿರಿಜಾಶಂಕರ್ ತುದಿಯಡ್ಕ, ದಯಾನಂದ ಆಳ್ವ, ಡಾ.ಕೇಶವ ಪಿ.ಕೆ, ಸಿ.ಎ.ಗಣೇಶ್ ಭಟ್, ಬೆಳ್ಯಪ್ಪ ಗೌಡ, ಬಾಲಕೃಷ್ಣ ಎಂ., ಲಿಂಗಪ್ಪ ಗೌಡ, ರಾಮಚಂದ್ರ ಆಗ್ರೋ, ಮಹಾಲಕ್ಷ್ಮೀ ಕೊರಂಬಡ್ಕ, ಡಾ. ಪುರುಷೋತ್ತಮ ಕೆ.ಜಿ., ದಳ ಸುಬ್ರಾಯ ಭಟ್, ಎನ್.ಎ.ಜಿತೇಂದ್ರ, ಪ್ರಸನ್ನ ಕಲ್ಲಾಜೆ, ಮಾಧವ ಬಿ.ಟಿ., ಮಧುಸೂದನ ಕೆ, ಎಂ.ಮೀನಾಕ್ಷಿ ಗೌಡ, ಶಾಪಿ ಕುತ್ತಮೊಟ್ಟೆ, ಚಂದ್ರಶೇಖರ ಪೇರಾಲ್, ಗೋಪಿನಾಥ ಎಂ.ಕೆ. ಯವರನ್ನು ಗೌರವಿಸಲಾಯಿತು. ರೋಟರಿ
ಕ್ಲಬ್ ಕಾರ್ಯದರ್ಶಿ ಕಸ್ತೂರಿಶಂಕರ್, ಯೋಜನಾ ಸಮಿತಿ ಕಾರ್ಯದರ್ಶಿ ಹರಿರಾಯ ಕಾಮತ್ ವೇದಿಕೆಯಲ್ಲಿದ್ದರು. ಲತಾ ಮಧುಸೂದನ್ ಪ್ರಾರ್ಥಿಸಿದರು. ಯೋಜನಾ ಸಮಿತಿ ಅಧ್ಯಕ್ಷರಾದ ಸಹಕಾರ ರತ್ನ ಸೀತಾರಾಮ ರೈ ಸವಣೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಹರಿರಾಯ ಕಾಮತ್ ವಂದಿಸಿದರು.









