ಸುಳ್ಯ:ಸುಳ್ಯ ರೋಟರಿ ಸಿಟಿ ವತಿಯಿಂದ ನಾರ್ಕೋಡ್ ಶಾಲೆಗೆ ನೂತನ ಶೌಚಾಲಯಕ್ಕೆ ಗುದ್ದಲಿಪೂಜೆಯನ್ನು ಉದ್ಯಮಿ ಹೇಮಂತ ಕಾಮತ್ ನೆರವೇರಿಸಿದರು. ರೋಟರಿ ಗವರ್ನರ್ ಭೇಟಿ ನೀಡುವ ಕಾರ್ಯಕ್ರಮದಂದು ಉದ್ಘಾಟನೆ ಎಂದು ಹೇಳಿದರು. ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡ್ ಸಮಾರಂಭದ
ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸದಸ್ಯರ ಸಹಕಾರದಿಂದ ಈ ಯೋಜನೆ ರೂಪಿಸಿರುವುದಾಗಿ ಹೇಳಿದರು. ಮುಖ್ಯ ಅತಿಥಿಯಾಗಿ ದೈಹಿಕ ಶಿಕ್ಷಕಿ ಆಶಾ ನಾಯಕ್ ಅವರು ರೋಟರಿಯ ಕೊಡುಗೆಗೆ ಕ್ರತಜ್ಞತೆ ಅರ್ಪಿಸಿದರು. ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜೆ.ಕೆ ರೈ, ಶಾಲಾ ಮುಖ್ಯೋಪಾಧ್ಯಾಯಿನಿ ಸುನಂದ.ಜಿ , ಮುಕುಂದ ನಾರ್ಕೋಡ್ ಸಿಆರ್ ಪಿ ಸವಿತಾ ಜಗದೀಶ್, ವಿಕ್ರಮ್ ಯುವಕ ಮಂಡಲದ ಅಧ್ಯಕ್ಷ ವಿನಯ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ಸುನಿಲ್ ಸ್ವಾಗತಿಸಿದರು ಮುಖ್ಯೋಪಾಧ್ಯಾಯಿನಿ ಸುನಂದ.ಜಿ ವಂದಿಸಿದರು.









