ಮಂಡೆಕೋಲು: ಮಂಡೆಕೋಲು ಗ್ರಾಮದ ಮಾರ್ಗ ಎಂಬಲ್ಲಿ ಬೇಡು ಎಂಬವರಿಗೆ ರೋಟರಿ ಕ್ಲಬ್ ಸುಳ್ಯದ ವತಿಯಿಂದ ನಿರ್ಮಿಸಲಾಗುವ ಮನೆಯ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು. ಶಿಲ್ಪಿ ಅಶೋಕ್ ಹಾಗೂ ಗುತ್ತಿಗೆದಾರ ಪ್ರಕಾಶ್ ಕಣೆಮರಡ್ಕ ನೇತೃತ್ವದಲ್ಲಿ
ಪೂಜಾ ವಿದಾನಗಳನ್ನು ನಡೆಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಾ ಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಮಂಡೆಕೋಲು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಶುಭ ಹಾರೈಸಿದರು. ಕ್ಲಬ್‌ನ ಸಮುದಾಯ ಸೇವೆಯ ನಿರ್ದೇಶಕರಾದ ಸನತ್ ಪಿ, ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷ ಪ್ರಭಾಕರನ್ ನಾಯರ್, ಮಧುಸೂದನ್.ಕೆ, ಕಸ್ತೂರಿ ಶಂಕರ್, ಜಗದೀಶ ಎ ಎಸ್, ಹರಿರಾಯ ಕಾಮತ್, ಆನಂದ ಖಂಡಿಗ ಉಪಸ್ಥಿತರಿದ್ದರು. ಮಂಡೆಕೋಲು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಅನಿಲ್ ತೋಟಪಾಡಿ, ಪಿ ಡಿ ಓ ರಮೇಶ್, ಗ್ರಾಮ ಪಂಚಾಯತ್ ಸದಸ್ಯೆ ಉಷಾ ಗಂಗಾಧರ್, ಮಿಲನ್ ಪಾತಿಕಲ್ಲು ಮನೆಯ ಫಲಾನುಭವಿ ಬೇಡು ಮತ್ತು ಆತನ ಸಂಬಂಧಿಕರು ಉಪಸ್ಥಿತರಿದ್ದರು .ಕಾರ್ಯದರ್ಶಿ ಮಧುರ ಎಂ ಆರ್ ವಂದಿಸಿದರು.