ಸುಳ್ಯ:ಸುಳ್ಯ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 3ರಂದು ಸಂಜೆ 6.30ಕ್ಕೆ ರಥಬೀದಿಯ ರೋಟರಿ ಸಮುದಾಯ ಸಭಾಭವನದಲ್ಲಿ ನಡೆಯಲಿದೆ ಎಂದು ಸುಳ್ಯ ರೋಟರಿ ಕ್ಲಬ್ನ ನೂತನ ಅಧ್ಯಕ್ಷೆ ಯೋಗಿತ ಗೋಪಿನಾಥ್ ತಿಳಿಸಿದ್ದಾರೆ.ಸುಳ್ಯ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು
2024-25 ರ ಸಾಲಿನಲ್ಲಿ ಅಧ್ಯಕ್ಷೆಯಾಗಿ ನೂತನ ತಂಡದೊಂದಿಗೆ ಸಮಾಜಕ್ಕೆ ಮನಮುಟ್ಟುವ ರೀತಿಯಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ವರ್ಷದ ರೋಟರಿ ಇಂಟರ್ನ್ಯಾಷನಲ್ ಅಧ್ಯಕ್ಷೆ ಸೈಫಿನಿ ಎ ಅರ್ಚಿಕ್ ಓರ್ವ ಮಹಿಳೆ. ಆದ್ದರಿಂದ ಈ ವರ್ಷ ಮಹಿಳಾ ಪದಾಧಿಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಂತರಾಷ್ಟ್ರೀಯ ರೋಟರಿ ಧೈಯವಾಕ್ಯ ‘ದಿ ಮ್ಯಾಜಿಕ್ ಆಫ್ ರೋಟರಿ’ ಎಂಬ ಧೈಯ ವಾಕ್ಯದಡಿಯಲ್ಲಿ ಡಿಸ್ಟಿಕ್ಸ್ ಗವರ್ನರ್ ವಿಕ್ರಂ ದತ್ತ ಅವರ ನೇತೃತ್ವದಲ್ಲಿ 9 ಡಿಸ್ಟ್ರಿಕ್ ಪ್ರಾಜೆಕ್ಟ್ನಲ್ಲಿ ಅಂಗನವಾಡಿ ಅಪ್ ಗ್ರೇಡೇಷನ್ ಪ್ರಾಜೆಕ್ಟ್ಲ್ಲಿ ಈಗಾಗಲೇ ಕಾರ್ಯಪ್ರವೃತರಾಗಿದ್ದೇವೆ. ಪದಗ್ರಹಣ ದಿನದಂದು 2 ಅಂಗನವಾಡಿ ಪ್ರಾಜೆಕ್ಟ್ ಬಿಡುಗಡೆ ಮಾಡಲಾಗುವುದು.
ಡಿಸ್ಟ್ರಿಕ್ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ನಲ್ಲಿ ಪಾರ್ಶ್ವವಾಯು ಪೀಡಿತ ಮಹಿಳೆಗೆ ಸಹಾಯ ಮಾಡಲಾಗುವುದು. ರಸ್ತೆ ಸುರಕ್ಷತಾ ಜಾಗೃತಿ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಶುದ್ಧ ಕುಡಿಯುವ ನೀರಿನ ನಿರ್ವಹಣೆ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳು,
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಮಾನಸಿಕವಾಗಿ ಸಂತಸವನ್ನು ನೀಡುವಂತಹ ವಿಭಿನ್ನ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗುವುದು. ದುಶ್ಚಟಗಳ ವಿರುದ್ಧ ಜಾಗೃತಿ, ಮಕ್ಕಳಿಗೆ ಟಿವಿ, ಮೊಬೈಲ್, ಡ್ರಗ್ಸ್ ನಂತಹ ಮಾದಕ ದ್ರವ್ಯ, ಧೂಮಪಾನ ಮುಂತಾದ ಕೆಟ್ಟ ಚಟಗಳಿಂದ ದೂರವಿರಿಸಲು ಜಾಗೃತಿ ಮೂಡಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು. ರೋಟರಿ ಅಂತಾರಾಷ್ಟ್ರೀಯ ನಿಧಿಯಿಂದ ಗ್ಲೋಬಲ್ ಗ್ರಾಂಟ್ ಮೂಲಕ ಸುಳ್ಯ ಜನತೆಗೆ ಅತಿ ಉಪಯುಕ್ತ ಇರುವ ದೊಡ್ಡ ಯೋಜನೆ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಅವರು ವಿವರಿಸಿದರು.
ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಡಾ.ಶ್ರೀಪತಿ ರಾವ್ ಪದಗ್ರಹಣ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಝೋನ್ 7ರ ಎಆರ್ಆರ್ಎಫ್ಸಿ ಕೆ.ಕೃಷ್ಣ ಶೆಟ್ಟಿ, ಝೋನ್ 5ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್, ಝೋನಲ್ ಲೆಪ್ಟಿನೆಂಟ್ ಪ್ರಭಾಕರನ್ ನಾಯರ್. ಕೆ ಭಾಗವಹಿಸಲಿದ್ದಾರೆ ಎಂದು ಯೋಗಿತ ಗೋಪಿನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ನೂತನ ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ, ಕೋಶಾಧಿಕಾರಿ ಹರಿರಾಯ ಕಾಮತ್, ಉಪಾಧ್ಯಕ್ಷ ಡಾ.ರಾಮ್ ಮೋಹನ್, ಕ್ಲಬ್ ಸರ್ವೀಸ್ ಡೈರೆಕ್ಟರ್ ಎನ್.ಎ.ಜಿತೇಂದ್ರ, ಕಮ್ಯುನಿಟಿ ಸರ್ವೀಸ್ ಡೈರೆಕ್ಟರ್ ಸನತ್ ಪೆರಿಯಡ್ಕ, ಪಬ್ಲಿಕ್ ಇಮೇಜ್ ಡೈರೆಕ್ಟರ್ ಜೆ.ಕೆ.ರೈ, ಸದಸ್ಯ ಎಂ.ಪಿ.ಗೋಪಿನಾಥ್, ಬುಲೆಟಿನ್ ಎಡಿಟರ್ ಶೈಮಾ ಜಿತೇಂದ್ರ ಉಪಸ್ಥಿತರಿದ್ದರು.