ಸುಳ್ಯ: ಕಲೆಯನ್ನು ಆಸ್ವಾದಿಸುವುದು ಹಾಗೂ ಪ್ರೋತ್ಸಾಹಿಸುವುದು ಜೀವನದಲ್ಲಿ ಸಂತೃಪ್ತಿಯನ್ನು ಹಾಗೂ ನೆಮ್ಮದಿಯನ್ನು ನೀಡುತ್ತದೆ ಎಂದು ಲಯನ್ಸ್ ಮಾಜಿ ರಾಜ್ಯಪಾಲ ಎಂ.ಬಿ ಸದಾಶಿವ ಹೇಳಿದ್ದಾರೆ. ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ನಡೆದ ಸ್ನೇಹ ಸಂಭ್ರಮ ಗಾನ ಕುಂಚ ಕಾರ್ಯಕ್ರಮದ ಕಲಾವಿದರನ್ನು ಸನ್ಮಾನಿಸಿ

ಮಾತನಾಡಿದರು. ಕೆ. ಆರ್ ಗೋಪಾಲಕೃಷ್ಣ ಇವರ ಹಾಡಿಗೆ ಪೊಳಲಿಯ ಚಿತ್ರ ಕಲಾ ಶಿಕ್ಷಕ ಮುರಳೀಧರ ಆಚಾರ್ಯ ಕೃಷ್ಣ ಮತ್ತು ರಾಧೆಯ ಚಿತ್ರ ಬಿಡಿಸಿದರೆ, ಸ್ಟೆನ್ಸಿಲ್ ಆರ್ಟ್ ಕಲಾವಿದ ಪರೀಕ್ಷಿತ್ ನೆಲ್ಯಾಡಿ ಬಾಲಕೃಷ್ಣ ನೆಟ್ಟಾರು ಹಾಡಿಗೆ ಡಾ.ಕುರುಂಜಿ ವೆಂಕಟ್ರಮಣ ಗೌಡ ಮಹಾಗೂ ಜಾನಕಿ ವೆಂಕಟ್ರಮಣ ಗೌಡ ಇವರ ಚಿತ್ರ ಬಿಡಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಶಿಧರ ಮಾವಿನಕಟ್ಟೆ ನೆರವೇರಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ನಿರ್ದೇಶಕ ಮಾಧವ ಬಿ ಟಿ , ರೋಟರಿ ಕಾರ್ಯದರ್ಶಿ ಮಧುರಾ ಎಂ ಆರ್, ಹಾಗೂ ಶಿವಪ್ರಸಾದ್ ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಸಿಟಿ ಅಧ್ಯಕ್ಷ ಮುರಳೀಧರ ರೈ ವಂದಿಸಿದರು.