ಸುಳ್ಯ: ರೋಟರಿ ಸದಸ್ಯರಾಗಿ ಅದರ ತತ್ವಗಳನ್ನು ಅರಿತು ಜನಸೇವೆ ಮಾಡುವುದು ಜೀವನದ ಅತ್ಯುತ್ತಮ ಕಾರ್ಯ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಈ ರಮೇಶ್ ಹೇಳಿದರು. ರೋಟರಿ ಚಾರ್ಟರ್ ನೈಟ್ ಹಾಗೂ ಕ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ರೋಟರಿ ಸಮುದಾಯ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ಪೂರ್ವಾಧ್ಯಕ್ಷರ ಸೇವೆಯನ್ನು ಗುರುತಿಸಿ
ಗೌರವಿಸಲಾಯಿತು. ರೋಟರಿ ಅಸಿಸ್ಟಂಟ್ ಗವರ್ನರ್ ಶಿವರಾಮ ಎನೇಕಲ್, ರೋಟರಿ ವಲಯ ಸೇನಾನಿ ಪ್ರೀತಂ ಡಿ ಕೆ ಶುಭ ಹಾರೈಸಿದರು. ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ ನಾಯರ್ ಅವರು ಸನ್ಮಾನಕ್ಕೆ ಉತ್ತರಿಸಿದರು. ನಿಯೋಜಿತ ಅಧ್ಯಕ್ಷ ಆನಂದ ಖಂಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮರ ಸುಳ್ಯ ರಮಣೀಯ ಸುಳ್ಯ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕ್ಲಬ್ ಅನ್ನು ಪ್ರತಿನಿಧಿಸಿದ ಪ್ರಭಾಕರನ್ ಸಿಎಚ್ ಹಾಗು ನೂತನವಾಗಿ ಸುಳ್ಯಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಈ ರಮೇಶ್, ಕೆ.ಸೀತಾರಾಮ ರೈ ಸವಣೂರು, ರಾಮಚಂದ್ರ ಪಿ. ಪ್ರಭಾಕರನ್ ನಾಯರ್ ಸೇರಿ ಮಾಜಿ ಅಧ್ಯಕ್ಷರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆತಿಥ್ಯವನ್ನು ಸುಧಾಕರ್ ಕೊಚ್ಚಿ ಇವರು ವಹಿಸಿದ್ದರು. ಸಭೆಯಲ್ಲಿ ರೋಟರಿ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಸ್ವಾಗತಿಸಿ, ಮಧುರಾ ಎಂ ಆರ್ ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.