ಸುಳ್ಯ: ಸುಳ್ಯ ಶಾಂತಿನಗರದ ಕ್ರೀಡಾಂಗಣದ ಕೆಳ ಭಾಗದಲ್ಲಿ ನಡೆಯುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿಗೆ ತರಲಾದ ಮರಳು ಮತ್ತು ಜಲ್ಲಿ ಕಲ್ಲನ್ನು ರಸ್ತೆಯಲ್ಲಿಯೇ ತುಂಬಿಡಲಾಗಿದ್ದು ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ಕಳೆದ ಒಂದು ವಾರದಿಂದ ಜಲ್ಲಿ ಹಾಗೂ

ಮರಳನ್ನು ರಸ್ತೆಯಲ್ಲಿ ಹಾಕಲಾಗಿದೆ. ಇದರಿಂದ ರಸ್ತೆಯಲ್ಲಿ ಸಾರ್ವಜನಿಕರಿಗೆ ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿದೆ. ಕೆಳಗಿನ ಮನೆಯವರಿಗೆ ಈ ರಸ್ತೆಯಲ್ಲಿ
ವಾಹನ ಸಂಚಾರ ಸಾಧ್ಯವಾಗುವುದಿಲ್ಲ. ನಡೆದಾಡಲೂ ಕಷ್ಟ ಆಗುತಿದೆ. ಅಸೌಖ್ಯ ಬಾದಿಸಿದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕೂಡ ಕಷ್ಟ ಆಗುತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದುದರಿಂದ ರಸ್ತೆಯಲ್ಲಿ ಹಾಕಿದ ಮರಳು, ಜಲ್ಲಿ ಕೂಡಲೇ ತೆರವು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಕ್ರೀಡಾಂಗಣ ಕಾಮಗಾರಿ ನಡೆಸುವಾಗ ಕೆಳ ಭಾಗದಲ್ಲಿ ಬೃಹದಾಕಾರದಲ್ಲಿ ಮಣ್ಣು ತುಂಬಲಾಗಿತ್ತು. ಇದರಿಂದ ಮಣ್ಣು ಕುಸಿಯುವ ಆತಂಕ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಕ್ರಿಡಾಂಗಣದ ಮಣ್ಣು ಹಾಕಿದ ಕೆಳ ಭಾಗದಲ್ಲಿ ತಡೆಗೋಡೆ ಕಾಮಗಾರಿ ನಡೆಯುತಿದೆ.









