ಸುಳ್ಯ: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಜಾಗೃತಿ ಕಾನೂನು ಅರಿವು ಕಾರ್ಯಕ್ರಮ ಜರಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷ
ಸುಕುಮಾರ್ ಕೊಡ್ತುಗುಳಿ ನೆರವೇರಿಸಿದರು. ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯ
ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಪ್ರತಿಭಾಜ್ಯೋತಿ ಪಿ ವಿ ಮಾತನಾಡಿ ಇತ್ತೀಚೆಗೆ ರಸ್ತೆ ಅಪಘಾತ ಗಳು ಹೆಚ್ಚಾಗುತ್ತಿದ್ದು ಯುವಕರಲ್ಲಿ, ವಿದ್ಯಾರ್ಥಿ ಗಳಲ್ಲಿ ರಸ್ತೆ ಸುರಕ್ಷತೆ ಜಾಗೃತಿ, ಟ್ರಾಫಿಕ್ ಕಾನೂನುಗಳ ಅರಿವು ಮೂಡಿಸ ಬೇಕಾಗಿದೆ ಎಂದರು ವೇದಿಕೆಯಲ್ಲಿ ವಕೀಲರಾದ ಚಂದ್ರಶೇಖರ್ ಉದ್ದಂತಡ್ಕ ,ಶಾಲಾ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ, ಸಂಯೋಜಕ ಶಾಫಿ ಕುತ್ತಮೊಟ್ಟೆ,ಹಿರಿಯ ಶಿಕ್ಷಕಿ ಜಯಂತಿ ಉಪಸ್ಥಿತರಿದ್ದರು. ಶಿಕ್ಷಕ ರಂಜಿತ್ ಸ್ವಾಗತಿಸಿದರು, ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಇರ್ಫಾನ ವಂದಿಸಿದರು.





