ಸುಬ್ರಹ್ಮಣ್ಯ: ಖ್ಯಾತ ಚಲನಚಿತ್ರ ನಟ ಹಾಗೂ ನಿರ್ದೇಶಕ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಸೋಮವಾರ ಕುಟುಂಬ ಸಮೇತರಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇವರೊಂದಿಗೆ
ಅವರ ಪತ್ನಿ ಪ್ರಗತಿ ಶೆಟ್ಡಿ, ತಾಯಿ ರತ್ನಾವತಿ ಹಾಗೂ ಮಕ್ಕಳು ಆಗಮಿಸಿದ್ದರು.ಶ್ರೀ ದೇವಳಕ್ಕೆ ಆಗಮಿಸಿದ ಅವರು ದೇವರ ದರುಶನ ಪಡೆದು ಮಧ್ಯಾಹ್ನದ ಮಹಾಪೂಜೆ ವೀಕ್ಷಿಸಿದರು. ದೇವಳದ ಅರ್ಚಕರು ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು ಭೋಜನಬಪ್ರಸಾದ ಸ್ವೀಕರಿಸಿದರು.









