ಸುಳ್ಯ: ತೀವ್ರ ಹದಗೆಟ್ಟಿರುವ ಸುಳ್ಯ- ಜಟ್ಟಿಪಳ್ಳ – ನೀರಬಿದಿರೆ ರಸ್ತೆ ಹಾಗೂ ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ
ಸುಳ್ಯ ತಾಲೂಕು ಬಿ.ಎಂ.ಎಸ್. ಸಂಯೋಜಿತ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಸುಳ್ಯನಗರ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಅಟೋ ಚಾಲಕರ ಸಂಘದ
ಕಾನೂನು ಸಲಹೆಗಾರರಾದ ಭಾಸ್ಕರ್ ರಾವ್ , ರಿಕ್ಷಾ ಯುನಿಯನ್ ಮಾಜಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ,ರಿಕ್ಷಾ ಯುನಿಯನ್ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಮಾತನಾಡಿ ‘ಸುಳ್ಯ ಕೊಡಿಯಾಲಬೈಲು, ನೀರಬಿದಿರೆ ರಸ್ತೆ ಹಾಗೂ ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಒತ್ತಾಯಿಸಿದರು. ರಸ್ತೆ ಸರಿಪಡಿಸದಿದ್ದರೆ ಉಗ್ರ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಸುಳ್ಯ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಮನವಿ ಆಲಿಸಿದರು. ಜಟ್ಟಿಪಳ್ಳ ರಸ್ತೆಗೆ 15 ಲಕ್ಷ ಇದೆ. ಅದು ಆ ರಸ್ತೆಗೆ ಸಾಕಾಗುವುದಿಲ್ಲ.ಜನಪ್ರತಿನಿಧಿಗಳ ಗಮನಕ್ಕೆ ಇದನ್ನು ತರುತ್ತೇವೆ ಎಂದು ಹೇಳಿದರು. ಯೂನಿಯನ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಕೋಶಾಧಿಕಾರಿ ನಿತ್ಯಾನಂದ, ಉಪಾಧ್ಯಕ್ಷ ರವಿ ಜಾಲ್ಸೂರು ಸಹಿತ ರಿಕ್ಷಾ ಚಾಲಕರು ಭಾಗವಹಿಸಿದ್ದರು.










