ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಯ ರಸ್ತೆಯಲ್ಲಿ ಇರುವ ರಿಕ್ಷಾ ನಿಲ್ದಾಣಕ್ಕೆ ಶೆಡ್ ನಿರ್ಮಾಣ ಮಾಡಲು ರಿಕ್ಷಾ ಚಾಲಕ ಮಾಲಕರರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಮೂಲಕ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರಿಗೆ
ಮನವಿ ಮಾಡಿದಾಗ ಮಂಜುನಾಥ ಭಂಡಾರಿ ಅವರು ರೂ.5 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಈ ಅನುದಾನ ನೀಡಲು ಅನಿಲ್ ರೈ ಚಾವಡಿಬಾಗಿಲು, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಹಮೀದ್ ಇವರು ರಿಕ್ಷಾ ಚಾಲಕ ಮಾಲಕರ ಬೇಡಿಕೆ ಯನ್ನು ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತಂದ ಪರಿಣಾಮ ಹಣ ಮಂಜೂರಾಗಿದೆ.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ರಾದ ಮಮತಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು









