ಸುಳ್ಯ: ಸುಂದರ ಸುಳ್ಯಕ್ಕೆ ತಿಲಕವಿಟ್ಟಂತೆ ಮೋಹಕ ವಸ್ತ್ರ ಮಳಿಗೆಯೊಂದು ಸುಳ್ಯದ ಹೃದಯಭಾಗದಲ್ಲಿ ತೆರೆದುಕೊಳ್ಳಲಿದೆ.ಪುರುಷರ ಮತ್ತು ಮಕ್ಕಳ ಕನಸಿನ ವಸ್ತ್ರಗಳ ಆಗರ ‘ರಿವೀವ್’ ನಾಳೆ(ಫೆ.27ರಂದು) ತೆರೆದುಕೊಳ್ಳಲಿದೆ. ಭಿನ್ನ ವಿಭಿನ್ನ ಫ್ಯಾಷನ್ ವಸ್ತ್ರಗಳ
ಐಷಾರಾಮಿ ಫ್ಯಾಷನ್ ಬಾಟಿಕ್ ‘ರಿವೀವ್’ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರಿನ ವಾಣೀಜ್ಯ ಸಂಕೀರ್ಣ ಸುಳ್ಯ ಸೆಂಟರ್ ನಲ್ಲಿ ಶುಭಾರಂಭಗೊಳ್ಳಲಿದೆ.ಪ್ಯಾಂಟ್, ಶರ್ಟ್, ಕುರ್ತಾ ಶರ್ವಾನಿ, ಪೈಜಾಮ್, ಡ್ರೆಸ್ ಕೋಡ್, ಸೂಟ್, ಶಾಲಾ ಸಮವಸ್ತ್ರಗಳು ಅಲ್ಲದೇ
ಪಾರ್ಟಿ ವೇರ್ ಡ್ರೆಸ್ಗಳು ಕ್ಲಪ್ತ ಸಮಯಕ್ಕೆ ದೇಹದ ಆಕಾರಕ್ಕೆ ಅನುಗುಣವಾಗಿ ನುರಿತ ಟೈಲರ್ಗಳಿಂದ ಅತ್ಯಾಧುನಿಕ ಶೈಲಿಯಲ್ಲಿ ಹೊಲಿದು ಕೊಡಲಾಗುವುದು.ಮಕ್ಕಳ ರೆಡಿಮೆಡ್ ಬಟ್ಟೆಗಳು ಅತ್ಯಾಧುನಿಕ ಶೈಲಿಯ ಉಡುಗೆ ತೊಡುಗೆಗಳು. ಬ್ರಾಂಡೆಡ್ ಕಂಪನಿ ವಸ್ತ್ರಗಳು ದೊರೆಯುತ್ತದೆ.ಫೆ.27ರಂದು ಪೂ.10ಕ್ಕೆ ರಿವೀವ್ ಶುಭಾರಂಭಗೊಳ್ಳಲಿದೆ. ಮಕ್ಕಳಿಂದ ಹಿಡಿದು ಎಲ್ಲಾ ಪ್ರಾಯದ ಪುರುಷರಿಗೆ ಆಕರ್ಷಕ ವಸ್ತ್ರಗಳೊಂದಿಗೆ ರಿವೀವ್ ಕೈಬೀಸಿ ಕರೆಯಲಿದೆ.
ಫ್ಯಾಷನ್, ಡಿಸೈನ್, ಸ್ಟಿಚ್ಚಿಂಗ್:
ಜೀನ್ಸ್, ಟಿ.ಶರ್ಟ್ ಸೇರಿದಂತೆ ವಿವಿಧ ಫ್ಯಾಷನ್ ರೆಡಿಮೇಡ್ ಡ್ರೆಸ್ಗಳ ಜೊತೆಗೆ ದೇಹದ ಆಕಾರಕ್ಕೆ ಅಪ್ಪುವ ಮತ್ತು ಮನಸ್ಸಿಗೆ ಒಪ್ಪುವ ವಸ್ತ್ರಗಳನ್ನು ಡಿಸೈನ್ ಮಾಡಿ, ಸ್ಟಿಚ್ ಮಾಡಿ ಕೊಡಲಾಗುತ್ತದೆ. ಅಂತಾರಾಷ್ಟ್ರೀಯ ಮಲ್ಟಿ ಬ್ರಾಂಡೆಡ್ ವಸ್ತ್ರಗಳನ್ನು ಡಿಸೈನ್ ಮಾಡಿ ಅನುಭವ ಇರುವ ನುರಿತ ಅನುಭವಿ ಡಿಸೈನರ್ ಮತ್ತು ಹೊಲಿಗೆದಾರರು ಬಟ್ಟೆಗಳನ್ನು ಸಿದ್ಧಪಡಿಸಿ ನೀಡಲಿದ್ದಾರೆ.ಪ್ಯಾಂಟ್, ಶರ್ಟ್, ಕುರ್ತಾ, ಶೆರ್ವಾನಿ, ಪೈಜಾಮ, ಡ್ರೆಸ್ ಕೋಡ್, ಸೂಟ್, ಶಾಲಾ ಸಮವಸ್ತ್ರಗಳು, ಕಂದೂರ, ಅಲ್ಲದೇ

ಮದುವೆ ಡ್ರೆಸ್ಗಳು ಅಥವಾ ಇತರ ಯಾವುದೇ ಸಮಾರಂಭಗಳಿಗೆ ಬೇಕಾದ ಬಟ್ಟೆಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ. ಗ್ರಾಹಕರ ಮನಸ್ಸಿನ ಇಚ್ಛೆಯ ಫ್ಯಾಷನ್ನಲ್ಲಿ ತಯಾರು ಮಾಡಿ ಕೊಡಲಾಗುವುದು. ಎಲ್ಲಾ ಪ್ರಸಿದ್ಧ ಬ್ರಾಂಡ್ಗಳ ಗುಣಮಟ್ಟದ ಬಟ್ಟೆಗಳು ಇಲ್ಲಿ ಲಭ್ಯವಿದೆ. ಅಲ್ಲದೆ ಅತ್ಯುತ್ತಮ ಗುಣಮಟ್ಟದ ಬೆಲ್ಟ್, ಶೂ, ಕ್ಯಾಪ್ ಸೇರಿದಂತೆ ಇತರ ವಸ್ತುಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರುತಿಳಿಸಿದ್ದಾರೆ. ವಸ್ತ್ರೋದ್ಯಮದ ಪರಂಪರೆ ಮತ್ತು ಅನುಭವದ ಹಿನ್ನಲೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಮತ್ತು ಆಧುನಿಕ ಫ್ಯಾಷನ್ ವಸ್ತ್ರಗಳನ್ನು ನೀಡುವ ಸಂಕಲ್ಪದೊಂದಿಗೆ ಸುಳ್ಯದಲ್ಲಿ ರಿವೀವ್ ವಸ್ತ್ರ ಮಳಿಗೆ ಶುಭಾರಂಭಗೊಳ್ಳಲಿದೆ ಎಂದು ಮಾಲಕರಾದ ರಹೀಂ ಬೀಜದಕಟ್ಟೆ ಮತ್ತು ಇರ್ಷಾದ್ ಬೀಜದಕಟ್ಟೆ ತಿಳಿಸಿದ್ದಾರೆ.
ಶುಭಾರಂಭ:
ಫೆ.27ರಂದು ಪೂ.10ಕ್ಕೆ ನೂತನ ವಸ್ತ್ರ ಮಳಿಗೆ ಶುಭಾರಂಭಗೊಳ್ಳಲಿದೆ.
ಶ್ರೀಮತಿ ಅಸಿಯಮ್ಮ ಸೈದು ಹಾಜಿ ಬೀಜದಕಟ್ಟೆ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದರೆ, ಎ.ಓ.ಎಲ್.ಇ ಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ,ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ
ಸದಾನಂದ ಮಾವಜಿ, ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ
ಟಿ.ಎಂ. ಶಹೀದ್ ತೆಕ್ಕಿಲ್,ಪ್ರಮುಖರಾದ

ಇಬ್ರಾಹಿಂ ಗೂನಡ್ಕ, ಡಿ.ವಿ.ಸತೀಶ್, ಎಂ ವೆಂಕಪ್ಪ ಗೌಡ, ಎನ್ ಎ ರಾಮಚಂದ್ರ, ಡಾ.ಲೀಲಾಧರ ಡಿ.ವಿ, ಲೋಕಯ್ಯ ಗೌಡ,
ಎಸ್ ಸಂಶುದ್ದೀನ್,ಎಂ.ಬಿ. ಸದಾಶಿವ,ಆದಂ ಹಾಜಿ ಕಮ್ಮಾಡಿ, ಹಮೀದ್ ಕುತ್ತಮೊಟ್ಟೆ,ಸೋಮಶೇಖರ ಕೊಂಯಿಗಾಜೆ, ಸಂತೋಷ್ ಕುತ್ತಮೊಟ್ಟೆ,ಉಮ್ಮರ್ ಕೆ ಎಸ್, ಕೆ.ಎಂ ಮುಸ್ತಫಾ,ಮಹಮ್ಮದ್ ಕುಂಞಿ ಗೂನಡ್ಕ, ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್, ಸಿದ್ದೀಕ್ ಕೊಕ್ಕೊ, ಜಿ.ಕೆ ಹಮೀದ್, ಕೆ.ಪಿ.ಜಾನಿ, ಚಂದ್ರಶೇಖರ ಬೀಜದಕಟ್ಟೆ,
ಅಬ್ದುಲ್ಲಾ ಸುಳ್ಯ ಕಾರ್ಸ್ ,ಅಬ್ದುಲ್ ಮಜೀದ್ ಜನತಾ,
ಆಲಿಕುಂಞಿ ಹಾಜಿ, ಅಬ್ದುಲ್ಲಾ ಕಟ್ಟೆಕ್ಕಾರ್, ಅಬ್ದುಲ್ ಕಲಾಂ ಬೀಕೊಚ್ಚಿ, ಪೈಸಲ್ ಕಟ್ಟೆಕಾರ್,ಸಲೀಂ ಪೆರಂಗೊಡಿ, ಹಮೀದ್ ಬೀಜದಕಟ್ಟೆ ಭಾಗವಹಿಸಲಿದ್ದಾರೆ ಎಂದು ರಿವೀವ್ ವಸ್ತ್ರಮಳಿಗೆಯ ಮಾಲಕರಾದ ರಹೀಂ ಬೀಜದಕಟ್ಟೆ ಹಾಗೂ ಇರ್ಷಾದ್ ಬೀಜದಕಟ್ಟೆ ತಿಳಿಸಿದ್ದಾರೆ.