ಸುಳ್ಯ: ಸುಳ್ಯ ನೆಹರೂ ಮೆಮೊರೀಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ 2024-25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ಗ್ರೇಡ್ 1 ತಹಶೀಲ್ದಾರ್ ಮಂಜುನಾಥ್ ಎಂ ನಿರ್ವಹಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಕಾರ್ಯದರ್ಶಿ ಹೇಮನಾಥ್ ಕೆ ವಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ರುದ್ರ ಕುಮಾರ್ ಎಂ ಎಂ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲ್, ಪೊಲೀಸ್ ಕಾನ್ ಸ್ಟೇಬಲ್ಗಳಾದ ಜ್ಯೋತಿ ಕೆ ವಿ ಹಾಗೂ ದಿನೇಶ್
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ಸಂಜೀವ ಕುದ್ಪಾಜೆ, ಯುವ ರೆಡ್ ಕ್ರಾಸ್ ಘಟಕದ ನಾಯಕ ಷಣ್ಮುಖ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಸದಸ್ಯರಾದ
ಸುಶ್ಮಿತಾ, ಸ್ಪಂದನಾ, ದೀಪಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಘಟಕ ನಾಯಕಿ ದೀಕ್ಷಾ ಎನ್ ಆರ್ ಸ್ವಾಗತಿಸಿ, ಸದಸ್ಯರಾದ ಪವನ್ ವಂದಿಸಿ, ರಿಷಿತಾ ಎ ಕಾರ್ಯಕ್ರಮ ನಿರೂಪಿಸಿದರು.
ರೆಡ್ ಕ್ರಾಸ್ ಸದಸ್ಯರು ಉಪಸ್ಥಿತರಿದ್ದರು.