ಸುಳ್ಯ:ರಿಪಾಟ್ರಿಯೇಟ್ ವೆಲ್ಪೇರ್ ಟ್ರಸ್ಟ್ ಚೆನ್ನೈ ಹಾಗೂ ಸುಳ್ಯ ರಿಪಾಟ್ರಿಯೇಟ್ ವೆಲ್ಪೇರ್ ಟ್ರಸ್ಟ್ ವತಿಯಿಂದ ತಮಿಳು ಬಾಂಧವರ ವಿಧ್ಯಾರ್ಥಿ ಸಮಾವೇಶ ಅ.12 ರಂದು ಸುಳ್ಯ ಪರಿವಾರಕಾನದ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನಡೆಯಲಿದೆ ಎಂದು ರಿಪಾಟ್ರಿಯೇಟ್ ವೆಲ್ಪೇರ್ ಟ್ರಸ್ಟ್ನ ಟ್ರಸ್ಟಿ ಶಿವಕುಮಾರ್.ಎಸ್. ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸುಳ್ಯ,ಪುತ್ತೂರು, ಕಡಬ ತಾಲೂಕಿನ ತಮಿಳು ಬಾಂಧವರ ವಿಧ್ಯಾರ್ಥಿಗಳಿಗಾಗಿ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆನ್ನೈ ರೆಪ್ಕೋ ಬ್ಯಾಂಕ್ ಅಧ್ಯಕ್ಷ ಇ.ಸಂದಾನಂ ವಹಿಸಲಿದ್ದಾರೆ.ವಿಶೇಷ ಅಭ್ಯಾಗತರಾಗಿ ಚೆನ್ನೈನ ರೆಪ್ಕೋ ಹೋಮ್ ಫೈನಾನ್ಸ್ ಇದರ ಅಧ್ಯಕ್ಷ ಸಿ.ತಂಗರಾಜು ಭಾಗವಹಿಸಲಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಇನ್ಬಶೇಖರ್.ಕೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಮುಖ್ಯ ಅಥಿತಿಗಳಾಗಿ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ,ಹಿರಿಯ ಕಾರ್ಮಿಕ ಮುಖಂಡ ಸುಬ್ಬಯ್ಯ ಬೇಂಗಮಲೆ , ರಿಪಾಟ್ರಿಯೇಟ್ ವೆಲ್ಪೇರ್ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷ ಸಂದ್ಯಾಗು ಕೌಡಿಚ್ಚಾರ್, ರಿಪಾಟ್ರಿಯೇಟ್ ವೆಲ್ಪೇರ್ ಟ್ರಸ್ಟ್ ಸುಳ್ಯ ಇದರ ಕಾರ್ಯದರ್ಶಿ ಥಾಮಸ್ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ತಮಿಳು ಮಕ್ಕಳಿಗಾಗಿ ತಿರುಕ್ಕುರಳ್ ಬಗ್ಗೆ ವಿಷೇಷ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದ್ದು ತಿರುಕ್ಕುರಳ್ ಸಂಶೊಧನಾ ಉಪನ್ಯಾಸಕ ಕೆ.ಗಣೇಶನ್ ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರಿಪಾಟ್ರಿಯೇಟ್ ವೆಲ್ಪೇರ್ ಟ್ರಸ್ಟ್ನ ಅಧ್ಯಕ್ಷ ಸಂದ್ಯಾಗು ಕೌಡಿಚ್ಚಾರ್,ಕೋಶಾಧಿಕಾರಿ ಶಕುಂತಲಾ,ಟ್ರಸ್ಟಿ ಪುನೀತ್ ಎಸ್ ಜಿ, ಸೆಲ್ವರಾಜ್ ಉಪಸ್ಥಿತರಿದ್ದರು.












