ಸುಳ್ಯ: ಕಂಡು ಕೇಳರಿಯದ ರೀತಿಯಲ್ಲಿ ಸುಳ್ಯ, ಕಡಬ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಸುಳ್ಯ ನಗರವೂ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ಸಂಜೆಯಿಂದ ರಾತ್ರಿ ತನಕ ಧಾರಾಕಾರ ಮಳೆಯಾಗಿದೆ. ಸುಳ್ಯ ನಗರದಲ್ಲಿ ಸುಮಾರು 3 ಗಂಟೆಗೂ ಅಧಿಕ ಸಮಯ ಭೋರ್ಗರೆದು ಸುರಿದ ಮಳೆಯಿಂದ ಎಲ್ಲೆಡೆ ಜಲಮಯವಾಗಿತ್ತು. ಸುಳ್ಯ ನಗರದಲ್ಲಿ 112 ಮಿಲಿ ಮೀಟರ್ ಮಳೆ ಸುರಿದಿದೆ ಎಂದು ಸುಳ್ಯ ನಗರದಲ್ಲಿ ಮಳೆ ದಾಖಲೆ

ಸುಳ್ಯ ನಗರದಲ್ಲಿ ಸುರಿದ ಭಾರೀ ಮಳೆಗೆ ತಾಲೂಕು ಪಂಚಾಯತ್ ಹಿಂಭಾಗದ ಪತ್ರಕರ್ತ ಗಂಗಾಧರ ಮಟ್ಟಿ ಅವರ ಮನೆಯ ಕಂಪೌಂಡ್ ಕುಸಿತ ಆಗಿದೆ.
ಮಾಡುವ ಶ್ರೀಧರ ರಾವ್ ಹೈದಂಗೂರು ಹೇಳುತ್ತಾರೆ. ಚೊಕ್ಕಾಡಿಯಲ್ಲಿ 125 ಮಿ.ಮಿ.ಮಳೆಯಾಗಿದೆ. ಬಾಳಿಲದಲ್ಲಿ 105 ಮಿ.ಮಿ.ಮಳೆ ಸುರಿದಿದೆ ಎಂದು ಮಳೆ ದಾಖಲೆಗಾರರಾದ ಪಿಜಿಎಸ್ಎನ್ ಪ್ರಸಾದ್ ಹೇಳುತ್ತಾರೆ. ಕಳೆದ 49 ವರ್ಷಗಳಿಂದ ಮಳೆ ದಾಖಲೆ ಮಾಡುವ ಪ್ರಸಾದ್ ಅವರ ಮಳೆ ದಾಖಲೆಯಲ್ಲಿಯೂ ಜನವರಿ ತಿಂಗಳಲ್ಲಿ ಈ ರೀತಿ ಮಳೆ ಸುರಿದ ಉದಾಹರಣೆಗಳಿಲ್ಲ. 2000ನೇ ಇಸವಿಯ ಜನವರಿ 12ರಂದು ಸುರಿದ 42 ಮಿ.ಮಿ.ಮಳೆ 1976ರಿಂದ 2024ರ ಅವಧಿಯಲ್ಲಿ ಜನವರಿ ತಿಂಗಳಲ್ಲಿ ಸುರಿದ ಇದುವರೆಗಿನ ಅತೀ ಹೆಚ್ಚು ಮಳೆಯ ದಾಖಲೆಯಾಗಿತ್ತು. ಈ ಬಾರಿ ಎಲ್ಲಾ ದಾಖಲೆಯನ್ನೂ ಉಡೀಸ್ ಮಾಡಿರುವ ಮಳೆರಾಯ ಮಳೆಗಾಲದಂತೆ ಮಳೆ ಸುರಿಸಿ ದಾಖಲೆ ಬರೆದಿದೆ ಎನ್ನುತ್ತಾರೆ ಪಿಜಿಎಸ್ಎನ್ ಪ್ರಸಾದ್.

ಅಡಿಕೆ ಕೃಷಿಕರು ಕಂಗಾಲು:
ಅಕಾಲಿಕವಾಗಿ ಸುರಿದ ಅನಿರೀಕ್ಷಿತ ಮಳೆಯಿಂದ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಕೃಷಿಕರ ಅಂಗಳಲ್ಲಿ ಕೊಯ್ಲು ಮಾಡಿ ಹಾಕದ ಅಡಿಕೆ ಮಳೆ ನೀರಿನಲ್ಲಿ ತೋಯ್ದು ಹೋಗಿದೆ. ಹಲವು ಕಡೆಗಳಲ್ಲಿ ಅನಿರೀಕ್ಷಿತ ಮಳೆಯ ಹೊಡೆತಕ್ಕೆ ಅಡಿಕೆ ನೀರಿನಲ್ಲಿ ತೇಲಿ ಹೋಗಿದೆ. ಕೆಲವೆಡೆ ಟರ್ಪಾಲು ಹಾಕಿ ಮುಚ್ಚಿದರೂ ಮಳೆಯ ಅರ್ಭಟಕ್ಕೆ ಅದು ಪರಿಣಾಮಕಾರಿಯಾಗಿಲ್ಲ. ಮಳೆಗೆ ಒದ್ದೆಯಾದ ಅಡಿಕೆ ಮತ್ತೆ ಒಣಗಿಸುವುದು ಕಷ್ಟ ಮಾತ್ರವಲ್ಲದೆ ಒಣಗಿಸಿದರೂ ಅದು ಕಪ್ಪು ಬಣ್ಣಕ್ಕೆ ತಿರುಗಿ ಗುಣಮಟ್ಟ ಕಳೆದುಕೊಳ್ಳುತ್ತದೆ. ಇದರಿಂದ ಭಾರೀ ನಷ್ಟ ಆಗುವ ಸಾಧ್ಯತೆ ಇದೆ ಎಂದು ಕೃಷಿಕರು ಹೇಳುತ್ತಾರೆ

3 ಗಂಟೆಗೂ ಹೆಚ್ಚು ಭಾರೀ ಮಳೆ:
ಶನಿವಾರ ಸಂಜೆ 6 ಗಂಟೆಯ ಬಳಿಕ ಧಾರಾಕಾರ ಮಳೆ ಆಭಗೊಂಡಿತ್ತು. ಸುಳ್ಯ ತಾಲೂಕಿನ ವಿವಿಧೆಡೆ ಕಡಬ ಹಾಗೂ ಸುಬ್ರಹ್ಮಣ್ಯದಲ್ಲಿಯೂ ಭರ್ಜರಿ ಮಳೆ ಸುರಿದಿದೆ. ಶನಿವಾರ ಸಂಜೆವರೆಗೆ ಬಿಸಿಲಿನ ವಾತವಾರಣ ಇದ್ದರೂ ಸಂಜೆ ವೇಳೆಗೆ ಅನಿರೀಕ್ಷಿತ ಮಳೆ ಆರಂಭಗೊಂಡಿದೆ. ನಿರಂತರ ಧಾರಾಕಾರ ಮಳೆ ತಡ ರಾತ್ರಿಯ ತನಕ ಮುಂದುವರಿದಿತ್ತು. ವಿವಿಧ ಭಾಗಗಳಲ್ಲಿ ಸುಮಾರು 3 ಗಂಟೆಗೂ ಅಧಿಕ ಕಾಲ ನಿರಂತರ ಧಾರಕಾರ ಮಳೆಯಾಗಿದೆ. ಸುಳ್ಯ ತಾಲೂಕಿನ ಗುತ್ತಿಗಾರು, ದೇವಚಳ್ಳ, ಎಲಿಮಲೆ, ಮರ್ಕಂಜ, ವಳಲಂಬೆ, ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಬೆಳ್ಳಾರೆ, ಐವರ್ನಾಡು, ಕೊಲ್ಲಮೊಗ್ರು, ಅರಂತೋಡು ಹೀಗೆ ಎಲ್ಲಾ ಕಡೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಲೆಯಾಗಿದೆ. ನಗರ, ಗ್ರಾಮೀಣ ಭಾಗ ಸೇರಿದಂತೆ ಎಲ್ಲಾ ಕಡೆ ರಸ್ತೆ, ಚರಂಡಿ ತುಂಬಿ ಹರಿದಿತ್ತು. ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಳವಾಗಿತ್ತು. ಕೆಲವೆಡೆ ಆವಾಂತರವೂ ಸೃಷ್ಠಿಸಿದೆ. ಕೆಲವು ಕಡೆ ಕಾಂಪೌಂಡ್ ಕುಸಿದಿರುವ ಬಗ್ಗೆ ವರದಿಯಾಗಿದೆ.ಮಳೆ ಮುಂದುವರಿಯುವ ಸಾಧ್ಯತೆ ಇದೆ. ಜ.10ರವರೆಗೆ ಕರಾವಳಿ ಜಿಲ್ಲೆಗಳು ಸೇರಿ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜನವರಿ ತಿಂಗಳಲ್ಲಿ ಸುರಿದ ಮಳೆ-ಪಿಜಿಎಸ್ಎನ್ ಪ್ರಸಾದ್ ಅವರ ಮಳೆ ದಾಖಲೆಯಿಂದ;
105 ಮಿ.ಮೀಬಾಳಿಲ (ದ) ಜನವರಿ ತಿಂಗಳಲ್ಲಿನ ದಿನವೊಂದರಲ್ಲಿ ಸುರಿದ ಗರಿಷ್ಠ ಮಳೆಯಿದು. ಈ ಹಿಂದೆ 12/01/2000 ದಲ್ಲಿ 42 ಮಿ.ಮೀ.ಮಳೆ ಆ ದಿನ ರಾತ್ರಿ ಸುರಿದಿತ್ತು. ಆ ವರ್ಷ ಜನವರಿ ತಿಂಗಳ ನಾಲ್ಕು ದಿನಗಳಲ್ಲಿ 79 ಮಿ.ಮೀ ದಾಖಲಾಗಿತ್ತು. ಅದು ಜನವರಿ ತಿಂಗಳ ಗರಿಷ್ಟ ಕೂಡಾ. 1976 ರಿಂದ ನಿನ್ನೆವರೆಗಿನ ಜನವರಿ ತಿಂಗಳ 1463 ದಿನಗಳಲ್ಲಿ 372 ಮಿ.ಮೀ. ದಾಖಲಾಗಿದೆ ! 1984, 1985, 1986, 1990, 1995, 2000, 2005, 2010, 2015, 2016, 2017, 2021, 2024 ಜನವರಿಯಲ್ಲಿ ಮಳೆಯಾದ ವರ್ಷಗಳು.









