ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಲೆಕ್ಕಾಚಾರದ ಮಧ್ಯೆ ಇಂದು ಬೆಂಗಳೂರಿನಲ್ಲಿ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಇರುವ ಈ ಹೊತ್ತಿನಲ್ಲಿಯೂ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳನ್ನು ಖಚಿತವಾಗಿ ಹೇಳಲಾಗದಷ್ಟು ಪೈಪೋಟಿ ಏರ್ಪಟ್ಟಿದೆ. ಈ ತುರುಸಿನಲ್ಲಿ ಫಫ್ ಡುಪ್ಲೆಸಿ ಬಳಗಕ್ಕೂ
ಒಂದು ಪುಟ್ಟ ಅವಕಾಶವಿದೆ. ಆದ್ದರಿಂದಲೇ ಆರ್ಸಿಬಿ ಆಡಲಿರುವ ಇನ್ನೆರಡೂ ಪಂದ್ಯಗಳು ಭಾರಿ ಕುತೂಹಲ ಕೆರಳಿಸಿವೆ.
ಸತತ ನಾಲ್ಕು ಪಂದ್ಯಗಳಲ್ಲಿ ಜಯಿಸಿ ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಆರ್ಸಿಬಿ ತಂಡವು ತವರಿನಂಗಳದ ಪಂದ್ಯದಲ್ಲಿ ಗೆಲ್ಲುವ ಕನಸು ಕಾಣುತ್ತಿದೆ. ಸದ್ಯ 10 ಅಂಕ ಗಳಿಸಿರುವ ಆರ್ಸಿಬಿಯು ಇನ್ನುಳಿದ ಎರಡೂ ಪಂದ್ಯಗಳಲ್ಲಿ ಉತ್ತಮ ರನ್ರೇಟ್ನೊಂದಿಗೆ ಜಯಿಸಬೇಕು. ಇತರ ತಂಡಗಳ ಸೋಲು, ಗೆಲುವಿನ ಆಧಾರದಲ್ಲಿ ಆರ್ಸಿಬಿಯ ಪ್ಲೇ ಆಫ್ ಸಾಧ್ಯತೆ ನಿರ್ಧಾರ ಆಗಲಿದೆ.
ಆರ್ಸಿಬಿಯು ತನ್ನ ಕೊನೆಯ ಪಂದ್ಯವನ್ನು (ಮೇ 18) ಚೆನ್ನೈ ವಿರುದ್ಧ ಆಡಲಿದೆ. ಋತುರಾಜ್ ಗಾಯಕವಾಡ ಬಳಗವು ಭಾನುವಾರ ಮಧ್ಯಾಹ್ನ ತನ್ನ ತವರಿನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಅದರಲ್ಲಿ ಗೆದ್ದರೆ ಚೆನ್ನೈ ಹಾದಿ ಸುಗಮವಾಗಲಿದೆ. ಇಲ್ಲದಿದ್ದರೆ ಕಠಿಣವಾಗಲಿದೆ. ಆರ್ಸಿಬಿ ತಂಡವು ಒಂದು ಪಂದ್ಯ ಸೋತರೂ ಅಧಿಕೃತವಾಗಿ ಪ್ಲೇ ಆಫ್ ರೇಸ್ನಿಂದ ಹೊರಬೀಳಲಿದೆ. ಅಂಕಪಟ್ಟಿಯ ಈ ಹಾವು–ಏಣಿಯ ಆಟದ ನಡುವೆ ಭಾನುವಾರದ ಪಂದ್ಯವು ಆರ್ಸಿಬಿ ಮತ್ತು ಡೆಲ್ಲಿ ತಂಡಗಳೆರಡಕ್ಕೂ ಮಹತ್ವದ್ದಾಗಿದೆ. ಆದರೆ ಡೆಲ್ಲಿ ತಂಡವು ರಿಷಭ್ ಪಂತ್ ಅವರಿಲ್ಲದೇ ಕಣಕ್ಕಿಳಿಯಬೇಕಿದೆ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಆರಂಭಿಕ ಹಂತದಲ್ಲಿ ಆರ್ಸಿಬಿಯ ಹಿನ್ನಡೆಗೆ ಕಾರಣವಾಗಿದ್ದು ಬೌಲಿಂಗ್ ಪಡೆ ಈಗ ಪುಟಿದೆದ್ದು ಪಂದ್ಯವನ್ನು ಗೆಲ್ಲಿಸಿಕೊಡುವ ಆಟವಾಡುತ್ತಿದೆ..
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೊ ಸಿನಿಮಾ ಅ್ಯಪ್