ಬೆಂಗಳೂರು:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಒಕ್ಕೂಟವು ಖರೀದಿಸಿದೆ. ಈ ನಡುವೆ ಆರ್ಸಿಬಿ ತಂಡದ ಹೆಸರು ಬದಲಿಸಲಾಗುತ್ತದೆಯೇ? ಎಂಬುದರ ಕುರಿತು ಚರ್ಚೆಗಳು ಆರಂಭವಾಗಿದ್ದವು. ಈ ಕುರಿತು ಫ್ರಾಂಚೈಸಿಯ ಸಿಇಒ ಆರ್ಯಮಾನ್ ಬಿರ್ಲಾ ಅವರ
ಸಹೋದರಿ ಅನನ್ಯಾ ಬಿರ್ಲಾ ಅವರು ಸ್ಪಷ್ಟನೆ ನೀಡಿದ್ದಾರೆ.
ಫ್ರಾಂಚೈಸಿಯ ಸಿಇಒ ಆರ್ಯಮಾನ್ ಬಿರ್ಲಾ ಅವರ ಸಹೋದರಿ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆರ್ಸಿಬಿ ತಂಡದ ಹೆಸರು ಬದಲಾವಣೆ ಕುರಿತು ಮಾಹಿತಿ ನೀಡಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈಗಿರುವ ಹೆಸರನ್ನು ಬದಲಾಯಿಸುವುದಿಲ್ಲ, ಇರುವ ಹೆಸರಿನಲ್ಲಿಯೇ ತಂಡ ಮುನ್ನಡೆಯಲಿದೆ’ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 16,705 ಕೋಟಿಗೆ ಖರೀದಿಸಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ , ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್ಸ್ಟೋನ್ನ ಕಂಪನಿಗಳ ಸಹಭಾಗಿತ್ವವಿದೆ.
ಆದಿತ್ಯ ಬಿರ್ಲಾ ಒಕ್ಕೂಟವು ಆರ್ಸಿಬಿಯ ಪುರುಷ ಮತ್ತು ಮಹಿಳಾ ತಂಡ ಎರಡರ ಮಾಲೀಕತ್ವ ಮತ್ತು ನಿರ್ವಹಣೆಯನ್ನು ವಹಿಸಿಕೊಂಡಿದೆ.










