ಮುಂಬೈ:ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 240 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.ಅಬ್ಬರಿಸಿದ ಫಿಲ್ ಸಾಲ್ಟ್ 36 ಎಸೆತಗಳಲ್ಲಿ
6 ಸಿಕ್ಸರ್ ಮತ್ತು 6 ಬೌಂಡರಿ 78 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕಿಂಗ್ ಕೊಹ್ಲಿ 38 ಎಸೆತಗಳ್ಲಲಿ 50 ರನ್ ಗಳಿಸಿದರು. ಬಳಿಕ, ಶುರುವಾಗಿದ್ದೇ ನಾಯಕ ರಜತ್ ಪಾಟೀದಾರ್ ಅಬ್ಬರ. 20 ಎಸೆತಗಳಲ್ಲಿ 5 ಸಿಕ್ಸರ್, 4 ಬೌಂಡರಿ ಸಹಿತ 53 ರನ್ ಪೇರಿಸಿದ ಪಾಟೀದಾರ್, ಮುಂಬೈ ಬೌಲರ್ಗಳನ್ನು ಅಕ್ಷರಶಃ ಕಾಡಿದರು. ಅಂತ್ಯದಲ್ಲಿ ಟಿಮ್ ಡೇವಿಡ್ 16 ಎಸೆತಗಳಲ್ಲಿ 32 ರನ್ ಗಳಿಸುವಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.ಮುಂಬೈ ಪರ ಬೂಮ್ರಾ ಸಾಂಟನರ್ ಸೇರಿದಂತೆ ಎಲ್ಲ ಬೌಲರ್ಗಳು ದುಬಾರಿಯಾದರು. ಯಾರೊಬ್ಬರಿಂದಲೂ ಆರ್ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.















